Wednesday, December 18, 2024
spot_img
HomeViral Newsಹಾಜರಾತಿ ಬೇಕಂದ್ರೆ ಕೆನ್ನೆಗೊಂದು ಕಿಸ್ ಕೊಡ್ಬೇಕು: ಶಿಕ್ಷಕಿಯಿಂದ ಸಿಹಿ ಮುತ್ತಿಗೆ ಬೇಡಿಕೆಯಿಟ್ಟ ಹೆಡ್‌ ಮಾಸ್ಟರ್‌!

ಹಾಜರಾತಿ ಬೇಕಂದ್ರೆ ಕೆನ್ನೆಗೊಂದು ಕಿಸ್ ಕೊಡ್ಬೇಕು: ಶಿಕ್ಷಕಿಯಿಂದ ಸಿಹಿ ಮುತ್ತಿಗೆ ಬೇಡಿಕೆಯಿಟ್ಟ ಹೆಡ್‌ ಮಾಸ್ಟರ್‌!

ಉತ್ತರ ಪ್ರದೇಶ: ಶಿಕ್ಷಕರಾದವರು  ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪವಾಗಬೇಕು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಬ್ದಾರಿ ಶಿಕ್ಷಕರದ್ದು. ಆದರೆ ಇಲ್ಲೊಬ್ಬ ಶಿಕ್ಷಕ ತಾನು ಎಲ್ಲಿದ್ದೇನೆ, ತನ್ನ ಕತ್ಯವ್ಯವೇನು, ತನ್ನ ವಯಸ್ಸೇನು ಎಂಬುವುದನ್ನೇ ಮರೆತು ಲೇಡಿ ಟೀಚರ್‌ ಒಬ್ಬರ ಜೊತೆ ಫ್ಲರ್ಟ್‌ ಮಾಡಿದ್ದಾರೆ. ಹೌದು ಹಾಜರಾತಿ ಕೊಡಿ ಎಂದು ಕೇಳಲು ಬಂದ ಶಿಕ್ಷಕಿಯ ಜೊತೆಗೆ ಮಾತನಾಡುತ್ತಾ, ಹಾಜರಾತಿ ಬೇಕೆಂದರೆ ನನ್ನ ಕೆನ್ನೆಗೊಂದು ಸಿಹಿ ಮುತ್ತನ್ನು ಕೊಡಬೇಕು ಎಂದು ಕೇಳಿದ್ದಾರೆ. ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ವರ್ತನೆಯ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿದ್ದು, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಹ ಶಿಕ್ಷಕಿಯಿಂದ ಮುತ್ತಿಗಾಗಿ ಬೇಡಿಕೆಯಿಟ್ಟಿದ್ದಾರೆ. ಹೌದು ಅಟೆಂಡೆನ್ಸ್‌ಗೆ ಪ್ರತಿಯಾಗಿ ಪ್ರಿನ್ಸಿಪಾಲ್‌ ಮಹಿಳಾ ಶಿಕ್ಷಕಿಯಿಂದ ಕೆನ್ನೆಗೊಂದು ಮುತ್ತು ಕೊಡುವಂತೆ ಕೇಳಿದ್ದಾರೆ. ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ಕೆಲಸವನ್ನು ಅವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಡಿಐಒಎಸ್‌ ಈ ಬಲಾಖೆಗೆ ಆದೇಶಿಸಿದೆ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಪ್ರತಿದಿನ ಪುಂಡಿ ಪಲ್ಯ ತಿಂದರೆ ಈ ಎಲ್ಲಾ ರೋಗಗಳು ಮಂಗಮಾಯವಾಗುತ್ತೆ!

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments