ಹುಬ್ಬಳ್ಳಿ: ಕುಂದಗೋಳ ಪಟ್ಟಣದಲ್ಲಿ ಆಟವಾಡಲು ಪಕ್ಕದ ಮನೆಗೆ ತೆರಳಿದ್ದ ಬಾಲಕಿ ಮೇಲೆ ಮನೆಯ ಮೇಲ್ಛಾವಣಿ ಹೊದಿಕೆ ಕುಸಿದು ಬಿದ್ದು ಮೃತಪಟ್ಟ ಬಾಲಕಿಯ ನಿವಾಸಕ್ಕೆ ಶಾಸಕ ಎಮ್.ಆರ್.ಪಾಟೀಲ್ ರವಿವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕಳೆದ ಮೂರು ದಿನಗಳ ಹಿಂದೆ ಅಮೃತಾ ಗದಿಗೆಪ್ಪ ಮೆಣಸಗೊಂಡ (05) ಬಾಲಕಿ ರಾಮಪ್ಪ ಅರಕಸಾಲಿ ಎಂಬಾತರ ಮನೆಗೆ ಆಟವಾಡಲು ಹೋದ ಸಂದರ್ಭದಲ್ಲಿ ನಿರಂತರ ಮಳೆಗೆ ನೆನೆದಿದ್ದ ಮನೆಯ ಮಣ್ಣಿನ ಮೇಲ್ಛಾವಣಿ ಕುಸಿದುಬಿದ್ದು ಮನೆಯ ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಳು.
ಈ ಹಿನ್ನೆಲೆ ಶಾಸಕ ಎಮ್.ಆರ್.ಪಾಟೀಲ್ ಮೃತ ಕುಟುಂಬಸ್ಥರಿಗೆ ಸರ್ಕಾರದಿಂದ ದೊರೆತ ಐದು ಲಕ್ಷದ ಚೆಕ್’ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ರಾಜು ಮಾವರಕರ್, ಪಟ್ಟಣ ಪಂಚಾಯತ ಸದಸ್ಯರಾದ ವಾಗೀಶ್ ಗಂಗಾಯಿ, ಮಂಜು ಹಿರೇಮಠ, ಪ್ರವೀಣ ಬಡ್ನಿ, ಸುಭಾಸ ಸಾದರ, ಮುಖಂಡರಾದ ಬಿ ಟಿ ಗಂಗಾಯಿ ಮಾಲತೇಶ ಶ್ಯಾಗೋಟಿ, ಸತೀಶ ಪಾಟೀಲ ಉಮೇಶ ಹೆಬಸೂರು, ರವಿಗೌಡ ಪಾಟೀಲ್,ರವಿ ಶಿರಸಂಗಿ ನಾಗರಾಜ್ ಸುಬರಗಟ್ಟಿ,ಸಿದ್ದು ಧಾರವಾಡ ಶೆಟ್ಟರ್, ನಾಗರಾಜ್ ದೇಶಪಾಂಡೆ ಮುದುಗಣ್ಣವರ್ ಸೇರಿದಂತೆ ಮುಂತಾದವರು ಇದ್ದರು.
ಹಾಜರಾತಿ ಬೇಕಂದ್ರೆ ಕೆನ್ನೆಗೊಂದು ಕಿಸ್ ಕೊಡ್ಬೇಕು: ಶಿಕ್ಷಕಿಯಿಂದ ಸಿಹಿ ಮುತ್ತಿಗೆ ಬೇಡಿಕೆಯಿಟ್ಟ ಹೆಡ್ ಮಾಸ್ಟರ್!