ಹುಬ್ಬಳ್ಳಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ( ಸಿಬಿಎಸಿ) ಸಿಬಿಎಸಿ ಸೌತ್ ಜೋನ್-2 ಸ್ಕೇಟಿಂಗ್ ಸ್ಪರ್ಧೆ 2024-25 ಬೆಳಗಾವಿಯ ಗುಡ್ ಶೆಪರ್ಡ್ ಸೆಂಟ್ರಲ್ ಸ್ಕೂಲ್ ನಲ್ಲಿ ಇತ್ತಿಚೆಗೆ ನಡೆಯಿತು.
ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಇನ್ಲೈನ್ ವಿಭಾಗದ ಸ್ಕೇಟರ್ ಕುಮಾರಿ ಸಾನ್ವಿ ಸಾಂಬ್ರಾಣಿ ಒಂದು ಚಿನ್ನದ ಪದಕ , ಒಂದು ಬೆಳ್ಳಿಯ ಪದಕ ಗೆದ್ದಿದ್ದಾರೆ.
ಅಷ್ಟೇ ಅಲ್ಲದೇ ಸಮರ್ಥ ಮರಾಠೆ ಒಂದು ಕಂಚಿನ ಪದಕ ಗೆದ್ದು ಹುಬ್ಬಳಿಗೆ ಕೀರ್ತಿ ತಂದಿದ್ದಾರೆ.
ಇನ್ನು ರೋಲರ್ ಸ್ಕೇಟಿಂಗ್ ಅಕಾಡೆಮಿಯ ತರಬೇತುದಾರರಾದ ಅಕ್ಷಯ್ ಸೂರ್ಯವಂಶಿಯವರ ಬಳಿ ವಿಜೇತ ಮಕ್ಕಳು ತರಬೇತಿ ಪಡೆದಿದ್ದಾರೆ.
ವಿಜೇತರು ಅಕ್ಟೋಬರ್ 24 ರಿಂದ 27ರವರೆಗೆ ನಡೆಯಲಿರುವ ಸಿಬಿಎಸ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸಾನ್ವಿ ಸಾಂಬ್ರಾಣಿ ಆಯ್ಕೆ ಯಾಗಿದ್ದು, ಈ ಸಾಧನೆಯನ್ನು ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಅಧ್ಯಕ್ಷರಾದ ನಿರ್ಮಲಾ ಸಿ. ಸಿ ಹಾಗೂ ಸದಸ್ಯರು , ಪೋಷಕರು, ಪ್ರಶಂಸಿಸಿದ್ದಾರೆ..