ಹುಬ್ಬಳ್ಳಿ: ಅಕ್ರಮವಾಗಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗಳನ್ನು ಪ್ರತ್ಯೇಕ ಪ್ರಕರಣದಲ್ಲಿ ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು, ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ಹೇಮರೆಡ್ಡಿ ಯಲ್ಲಪ್ಪ ರೆಡ್ಡೆರ್ ಎಂಬಾತ ತನ್ನ ಹೊಲದಲ್ಲಿ ಹಸಿ ಗಾಂಜಾ ಗಿಡಗಳನ್ನು ಬೆಳೆದಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಹಾಗೂ ಧಾರವಾಡ ಸಿಇಎನ್ ಠಾಣೆಯ ತನಿಖಾಧಿಕಾರಿ ಮುರಗೇಶ ಟಿ.ಎಸ್ ಜಂಟಿ ಕಾರ್ಯಾಚರಣೆ ನಡೆಸಿ ಗಾಂಜಾ ಬೆಳೆದಿದ್ದ ಆರೋಪಿ ಹಾಗೂ 12 ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಒಟ್ಟು ತೂಕ 7ಕೆಜಿ 40 ಗ್ರಾಂ ಆಗಿದೆ.
ಮತ್ತೊಂದು ಪ್ರಕರಣದಲ್ಲಿ ಶಿರಗುಪ್ಪಿ ಗ್ರಾಮದ ಶಿವಯ್ಯ ಮಂಟೂರ ಎಂಬಾತನನ್ನು ಬಂಧಿಸಿದ್ದಾರೆ. ಈತ ತನ್ನ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ, ಇದರ ಒಟ್ಟು ತೂಕ 6 ಕೆಜಿ 785 ಗ್ರಾಂ ಆಗಿದೆ.
ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇನ್ನು ಈ ಒಂದು ಕಾರ್ಯಾಚರಣೆಯಲ್ಲಿ ಗ್ರಾಮೀಣ ಠಾಣೆಯ ಪಿಎಸ್ಐ ಸಚಿನ್ ಅಲಮೇಲ್ಕರ್, ಲಕ್ಷ್ಮೀ ದಿಗ್ಗಿನಾಳ, ಎಎಸ್ಐ ಎನ್.ಎಮ್.ಹೊನ್ನಪ್ಪನವರ, ಸಿಬ್ಬಂದಿ ಎ.ಎ.ಕಾಕರ್, ಮಾಂತೇಶ ಮದ್ದೀನ್, ಧಾರವಾಡ ಸಿಇಎನ್ ಠಾಣೆಯ ಸಿಬ್ಬಂದಿ ಪಿಎಸ್ಐ ಯು.ಡಿ.ದುದಾಳಕರ್, ಎಮ್.ಜಿ.ಕರ್ಲವಾಡ್, ಎಮ್.ಬಿ.ಕಂಬೋಗಿ, ಬಸವರಾಜ ಶಿರಕೋಳ, ಡಿ.ಎಮ್.ಬಳಿಗೇರ್ ಸೇರಿದಂತೆ ಮುಂತಾದವರು ಇದ್ದರು.