ಹುಬ್ಬಳ್ಳಿ: ೧೭ ಸೆಪ್ಟೆಂಪರ್ ನಿಂದ ೨೨ ಸೆಪ್ಟೆಂಬರ್ ವರೆಗು ಇಟಲಿಯಲ್ಲಿ ನಡೆದ ವರ್ಲ್ಡ್ ಸ್ಕೇಟ್ ಗೇಮ್ಸ್ ೨೦೨೪ ನಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಸ್ಕೇಟರ್ ಆದ ತ್ರಿಶಾ ಜಡಲ ಟೀಮ್ ಇಂಡಿಯಅನ್ನು ಪ್ರತಿನಿಧಿಸುತ್ತ ಟೀಮ್ ಇಂಡಿಯಾಗೆ ಕಂಚಿನ ಪದಕ ಗೆದ್ದು ತಂದಿದಾರೆ
ತ್ರಿಶಾ ಉತ್ತರ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಏಕೈಕ ಬಾಲಕಿಯಾಗಿದ್ದಾರೆ .
ಈ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ತ್ರಿಶಾ ಕಳೆದ ಒಂದು ವರ್ಷ ದಿಂದ ಅಭ್ಯಾಸ ಮಾಡುತಿದ್ದರು.ಈ ಮೊದಲೇ ತ್ರಿಶಾ ಅವರು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ,ಹಾಗು ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದಿದ್ದು ಅವರ ಈ ಸಾಧನ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.
ಈ ಸಾಧನೆಯನ್ನು ಕರ್ನಾಟಕ ರೋಲರ್ ಸ್ಕಟಿಂಗ್ ಪ್ರಧಾನ ಕಾರ್ಯದರ್ಶಿಯವರದ ಇಂಧೂದರ ಸೀತಾರಾಂ, ಹುಬ್ಬಳ್ಳಿ ರೋಲರ್ ಸ್ಟೇಟಿಂಗ್ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಸಿ . ಸಿ. ಯವರು ,ಹಾಗೂ ಅಕಾಡೆಮಿ ಯ ತರಬೇತುದಾರರಾದ ಅಕ್ಷಯ್ ಸೂರ್ಯವಂಶಿಯಾವರು , ಸದಸ್ಯರು, ಪೋಷಕರು, ಧಾರವಾಡ ಜಿಲ್ಲಾ ರೋಲರ್ ಸ್ಟೇಟಿಂಗ್ ಅಸೋಸಿಯೇಷನ್ ಅದ್ಯಕ್ಷರು, ಕಾರ್ಯದರ್ಶಿಗಳು ಪ್ರಶಂಸಿಸಿದ್ದಾರೆ.