ಹುಬ್ಬಳ್ಳಿ: ಕಳ್ಳತನ ಮಾಡಿದ್ದ ಮೊಬೈಲ್’ಗಳನ್ನು ಮಾರಾಟಕ್ಕೆ ಯತ್ನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಲ್ಲಿನ ಸೆಟ್ಲಮೆಂಟ್ ನಿವಾಸಿಯಾಗಿರುವ ಸ್ಯಾಮ್ಸನ್ ಜಮಖಂಡಿ ಎಂಬಾತ ವಿವಿಧ ಕಂಪನಿಗಳ 10 ಮೊಬೈಲ್ ಗಳನ್ನು ಕುಸುಗಲ್ ಬಳಿಯ ರಿಂಗ್ ರೋಡ್ ಹತ್ತಿರದಲ್ಲಿ ಲಾರಿ ಚಾಲಕರಿಗೆ ಮಾರಾಟಕ್ಕೆ ಯತ್ನ ನಡೆಸಿದ್ದಾನೆ.
ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ನೇತೃತ್ವದಲ್ಲಿ ಪಿಎಸ್ಐ ಸಚಿನ್ ಅಲಮೇಲಕರ, ಸಿಬ್ಬಂದಿಗಳಾದ ಎನ್.ಎಮ್.ಹೊನ್ನಪ್ಪನವರ, ಎ.ಎ.ಕಾಕರ, ಚನ್ನಪ್ಪ ಬಳ್ಳೊಳ್ಳಿ, ಗಿರೀಶ್ ತಿಪ್ಪಣ್ಣವರ, ಎ.ಎ.ಪಾಟೀಲ್, ರವಿ ಮರಡೂರ ಒಳಗೊಂಡ ತಂಡ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಅಷ್ಟೇ ಅಲ್ಲದೇ ಬಂಧಿತನಿಂದ 50 ಸಾವಿರ ಕಿಮ್ಮತ್ತಿನ 10 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನು ಗ್ರಾಮೀಣ ಠಾಣೆಯ ಪೊಲೀಸ್ ಕಾರ್ಯವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಬರಮನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.