ಹುಬ್ಬಳ್ಳಿ: ಅಪ್ರಾಪ್ತ ವಯಸ್ಕನನ್ನು ಯಾವುದೋ ದುರುದ್ದೇಶದಿಂದ ಅಪಹರಣ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಸಂಗೇದೇವರಕೊಪ್ಪದಲ್ಲಿ ನಡೆದಿದೆ.
ಬ್ರಹ್ಮಾನಂದ ಕೆಳಗಿನಮನಿ (14) ಕಾಣೆಯಾದ ಬಾಲಕನಾಗಿದ್ದು, ಮೂಲತಃ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹುಲ್ಲತ್ತಿ ಗ್ರಾಮದವನಾಗಿದ್ದಾನೆ. ಸದ್ಯ ಕಲಘಟಗಿ ತಾಲೂಕಿನ ಸಂಗೇದೇವರಕೊಪ್ಪದಲ್ಲಿ ತನ್ನ ಅಣ್ಣನ ಮನೆಯಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.
ಈತ ಎಂದಿನಂತೆ 2023 ಅ.6 ರಂದು ಕಲಘಟಗಿ ಪಟ್ಟಣದಲ್ಲಿನ ಜನತಾ ಇಂಗ್ಲಿಷ್ ಸ್ಕೂಲ್’ಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದಾನೆ. ಆದರೆ ಈವರೆಗೆ ಮನಗೆ ಬಂದಿಲ್ಲ. ಹೀಗಾಗಿ ಕಾಣೆಯಾದ ಬಾಲಕನ ಕುರಿತು ಕುಟುಂಬಸ್ಥರು ಎಲ್ಲೆಡೆ ಹುಡುಗಾಟ ನಡೆಸಿದ್ದಾರೆ. ಆದರೂ ಸುಳಿವು ಸಿಕ್ಕಿಲ್ಲ.
ಇದೀಗ ಕಾಣೆಯಾದ ಬ್ರಹ್ಮಾನಂದನನ್ನು ಹುಡುಕಿಕೊಡಿ ಎಂದು ಕುಟುಂಬಸ್ಥರು ಕಲಘಟಗಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ದೂರು ದಾಖಲಿಸಿದ್ದಾರೆ. ಅದರಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಬ್ರಹ್ಮಾನಂದನ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸಿದ್ದಾರೆ.
ಬಾಲಕನ ಚಹರೆ: 4 ಅಡಿ ಎರಡು ಇಂಚು ಎತ್ತರ ಮತ್ತು ಸದೃಢಬಾದ ಮೈಕಟ್ಟು, ಸಾದಾ ಮಪ್ಪು ಕೈಬಣ್ಣ, ಕಪ್ಪು ಕೂದಲು, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ದಿನ ಕಾಫಿ ಬಣ್ಣದ ಶರ್ಟ್ (ಸ್ಕೂಲ್ ಯುನಿಫಾರ್ಮ್) ಹಾಕಿದ್ದು, ಮೂಗಿನ ಮೆ ಬಿದ್ದ ಗಾಯದ ಕಲೆ, ಎಡ ಕಣ್ಣಿನ ಹುಬ್ಬಿನ ಕೆಳಗೆ ಹೊಲಿಗೆ ಹಾಕಿದ ಹಳೇ ಗಾಯದ ಕಲೆ ಇದೆ. ಈತನ ಗುರುತು ಸಿಕ್ಕಲ್ಲಿ ದೂರವಾಣಿ ಸಂಖ್ಯೆ 08360-222733, 9480804351 ಗೆ ಸಂಪರ್ಕಿಸಲು ಕೋರಲಾಗಿದೆ.