Sunday, December 22, 2024
spot_img
Homeಕ್ರೈಂನಾನು ನಿನ್ನನ್ನ ಲವ್ ಮಾಡ್ತಿದ್ದೀನಿ, ನಿರಾಕರಿಸಿದ್ರೆ ನೇಹಾ ರೀತಿ ಕೊಲೆ ಗ್ಯಾರಂಟಿ: ಬಾಲಕಿಗೆ ಬೆದರಿಸಿದ್ದ ಆರೋಪಿ...

ನಾನು ನಿನ್ನನ್ನ ಲವ್ ಮಾಡ್ತಿದ್ದೀನಿ, ನಿರಾಕರಿಸಿದ್ರೆ ನೇಹಾ ರೀತಿ ಕೊಲೆ ಗ್ಯಾರಂಟಿ: ಬಾಲಕಿಗೆ ಬೆದರಿಸಿದ್ದ ಆರೋಪಿ ಅಂದರ್..!

ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ನೇಹಾ ಪ್ರಕರಣದಂತೆ ಮತ್ತೊಂದು ಧಮ್ಕಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಮನೆ ಬಳಿ ಹೋಗಿ ನೇಹಾ ಹಿರೇಮಠನಂತೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಬಾಲಕಿ ಪೋಷಕರಿಂದ ದೂರು ನೀಡಿದ್ದು, ಅಬ್ಬಾಸ್​ ಎಂಬಾತನ ವಿರುದ್ದ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಬಾಲಕಿಯು ಶಾಲೆಗೆ ಹೋಗುವಾಗ ಅಬ್ಬಾಸ್​​ ಎಂಬುವವನು ಸ್ನೇಹ ಮಾಡಿಕೊಂಡಿದ್ದಾನೆ. ನಂತರ ಕೆಲ ಬಾರಿ ಗಾರ್ಡನ್​ಗೂ ಕರೆದುಕೊಂಡು ಹೋಗಿದ್ದಾನೆ. ಜೂನ್​ 22 ರಂದು ಶಾಲೆಯಿಂದ ಮನೆಗೆ ಬಿಡುವುದಾಗಿ ಹೇಳಿ ರೇವಡಿಹಾಳ‌ ಬ್ರಿಡ್ಜ್ ಹತ್ತಿರ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚರಕ್ಕೆ ಯತ್ನಿಸಿರುವ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಗಸ್ಟ್​​ 18ರಂದು ಬಾಲಕಿ ಮನೆ ಬಳಿ ಬಂದು ಅಬ್ಬಾಸ್​ ಗಲಾಟೆ ಮಾಡಿದ್ದಾನೆ. ಅಪ್ರಾಪ್ತ ಬಾಲಕಿಯನ್ನು ಎಳೆದಾಡಿದ್ದಾನೆ. ಈ ವೇಳೆ ಬಾಲಕಿ ಪೋಷಕರಿಗೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಅಬ್ಬಾಸ್ ವಿರುದ್ದ ದೂರು ದಾಖಲಾಗಿತ್ತು. ಸಧ್ಯ ಆರೋಪಿ ಅರೆಸ್ಟ್ ಆಗಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments