ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಏನು ಬೇಕಾದರೂ ಮಾಡುತ್ತಾರೆ, ನಾಚಿಕೆ ಬಿಟ್ಟು ಎಂತಹ ಭಂಡ ಧೈರ್ಯಕ್ಕೂ ಕೈ ಹಾಕುತ್ತಾರೆ. ಇಲ್ಲೊಬ್ಬ ಯುವಕ ಕೂಡಾ ಅಂತಹದ್ದೇ ಸಾಹಸಕ್ಕೆ ಕೈ ಹಾಕಿದ್ದು, ಚಾಲೆಂಜ್ ವಿಡಿಯೋ ಸಲುವಾಗಿ ಯಾವುದೇ ಅಂಜಿಕೆ, ನಾಚಿಕೆ ಇಲ್ಲದೆ ಸಾರ್ವಜನಿಕರ ಎದುರೇ ನಡು ರಸ್ತೆಯಲ್ಲಿ ನಿಂತು ಜಳಕ ಮಾಡಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ರಾತ್ರೋ ರಾತ್ರಿ ಫೇಮಸ್ ಆಗಲು, ಲೈಕ್ಸ್ ಫಾಲೋವರ್ಸ್ ಗಿಟ್ಟಿಸಲು ಕೆಲವೊಬ್ಬರು ಏನಾದರೊಂದು ಸರ್ಕಸ್ ಮಾಡುತ್ತಿರುತ್ತಾರೆ. ಹೀಗೆ ತಮ್ಮ ಹುಚ್ಚು ರೀಲ್ಸ್‌ಗಳಿಂದಲೇ ಫೇಮಸ್ ಆದವರು ಅದೆಷ್ಟೋ ಜನರಿದ್ದಾರೆ. ಹೀಗೆ ಭಂಡ ಧೈರ್ಯದಿಂದ ಕೆಲ ಯುವಕರು ಬೈಕ್ ಮೇಲೆ ಸ್ಟಂಟ್ ಮಾಡುತ್ತಾ ವಿಡಿಯೋಗಳನ್ನು ಮಾಡಿದ್ರೆ, ಇನ್ನೂ ಕೆಲವೊಂದಿಷ್ಟು ಜನ ನಾಚಿಕೆ, ಅಂಜಿಕೆ ಬಿಟ್ಟು ಮೆಟ್ರೋ, ರೈಲ್ವೆ ಸ್ಟೇಷನ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿಯೇ ರೀಲ್ಸ್ ವಿಡಿಯೋ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಇಂತಹದ್ದೇ ಭಂಡ ಧೈರ್ಯವೊಂದನ್ನು ಮಾಡಿದ್ದು, ಚಾಲೆಂಜ್ ವಿಡಿಯೋ ಮಾಡುವ ಸಲುವಾಗಿ ನಾಚಿಕೆ ಬಿಟ್ಟು, ಸಾರ್ವಜನಿಕರ ಎದುರೇ ನಡು ರಸ್ತೆಯಲ್ಲಿ ನಿಂತು ಜಳಕ ಮಾಡಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ