Sunday, December 22, 2024
spot_img
Homeರಾಜಕೀಯವೀರಶೈವ ಲಿಂಗಾಯತ ಸ್ವಾಮೀಜಿಗಳು ಅಹಿಂದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ರಜತ್ ಉಳ್ಳಾಗಡ್ಡಿಮಠ ಮನವಿ

ವೀರಶೈವ ಲಿಂಗಾಯತ ಸ್ವಾಮೀಜಿಗಳು ಅಹಿಂದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ರಜತ್ ಉಳ್ಳಾಗಡ್ಡಿಮಠ ಮನವಿ

ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಭಾಜಪ ಪಕ್ಷವು ಉದ್ದೇಶ ಪೂರ್ವಕವಾಗಿ ಲಿಂಗಾಯತ ನಾಯಕರನ್ನು ಕಡೆ ಗಣಿಸಿದೆ ಅಲ್ಲದೆ ಮತ್ತೊಂದು ಕಡೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲಿಂಗಾಯತ ನಾಯಕರನ್ನು ಮೂಲೆ ಗುಂಪು ಮಾಡಿರುವುದು ವಾಸ್ತವವಾಗಿದೆ ಆದರಿಂದ ಸಾಮಾಜಿಕ ನ್ಯಾಯ ಒದಗಿಸುವ ಕಾಂಗ್ರೆಸ್ ಪಕ್ಷಕ್ಕೆ ಸ್ವಾಮೀಜಿಗಳು ಬೆಂಬಲ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಮನವಿ ಮಾಡಿದ್ದಾರೆ.

ಈ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರ ಕುತಂತ್ರದಿಂದ ಲಿಂಗಾಯತ ಪ್ರಬಲ ನಾಯಕರಾದ ವಿನಯ್ ಕುಲಕರ್ಣಿ, S I ಚಿಕ್ಕಣಗೌಡರ , ಸಿ ಎಂ ನಿಂಬಣ್ಣವರ,ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸೀಮಾ ಮಸೂತಿ ಸೇರಿದಂತೆ ಅನೇಕ ಮುಖಂಡರು ಅನ್ಯಾಯಕ್ಕೆ ಒಳಗಾಗಿದ್ದಾರೆ .
ಆದ್ರೆ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಮೂರು ಜನ ಲಿಂಗಾಯತ ನಾಯಕರಿಗೆ ಟಿಕೆಟ್ ನೀಡಿತ್ತು ಅಲ್ಲದೆ ಸೋತ ಶೆಟ್ಟರ್ ಅವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿತ್ತು

ಇದೀಗ ಜಗದೀಶ್ ಶೆಟ್ಟರ್ ಅವರಿಂದ ತೆರವಾಗಿರುವ ಪರಿಷತ್ ಸ್ಥಾನವನ್ನು ಕೂಡ ಧಾರವಾಡ ಜಿಲ್ಲೆಯ ಲಿಂಗಾಯತ ನಾಯಕರಿಗೆ ನೀಡುವ ಮಾತನ್ನು ಕಾಂಗ್ರೆಸ್ ಹೈ ಕಮಾಂಡ್ ನೀಡಿದ್ದು.ಲಿಂಗಾಯತ ನಾಯಕತ್ವಕ್ಕೆ ವಿಶೇಷ ಮನ್ನಣೆ ನೀಡುತ್ತಿದೆ.ಅಲ್ಲದೆ ಮುಂದೆಯೂ ನೀಡಲಿದೆ ಎನ್ನುವ ಭರವಸೆ ನಮಗೆ ಇದೆ

ಆದ್ದರಿಂದ ಲಿಂಗಾಯತ ಸಮುದಾಯ ಹಾಗೂ ಸ್ವಾಮೀಜಿಗಳು ಈ ಬಾರಿ ಕಾಂಗ್ರೆಸ್ ಪಕ್ಷದ ಜಾತ್ಯತೀತ ಮುಗ್ದ ನಾಯಕನಾಗಿರುವ ವಿನೋದ್ ಅಸೋಟಿ ಅವರಿಗೆ ಬೆಂಬಲ ನೀಡಬೇಕು ಎನ್ನುವುದು ನಮ್ಮ ಮನವಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಪತ್ರಿಕಾ ಪ್ರಕಟನೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments