Sunday, December 22, 2024
spot_img
Homeರಾಜಕೀಯಜೋಶಿಯವರಿಗೆ ಅಧಿಕಾರ ಹಾಗು ಸಂಪತ್ತಿನ ಮದ ಏರಿದೆ: ನಗರದಲ್ಲಿ ದಿಂಗಾಲೇಶ್ವರ ಶ್ರೀ

ಜೋಶಿಯವರಿಗೆ ಅಧಿಕಾರ ಹಾಗು ಸಂಪತ್ತಿನ ಮದ ಏರಿದೆ: ನಗರದಲ್ಲಿ ದಿಂಗಾಲೇಶ್ವರ ಶ್ರೀ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲಿಂಗಾಯತ ಮತ್ತು ಉಳಿದ ಸಮಾಜವನ್ನು ತುಳಿಯುತ್ತಿದ್ದಾರೆ. ಸ್ವಾಮೀಜಿಗಳನ್ನು ಅಪಮಾನಗೊಳಿಸಿದ್ದಾರೆ. ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಅವರಿಗೆ ನೀಡಿರುವ ಟಿಕೆಟ್’ನ್ನು ಬಿಜೆಪಿ ವರಿಷ್ಠರು ಮಾ. 31 ರೊಳಗೆ ಬದಲಾವಣೆ ಮಾಡಬೇಕೆಂದು ಶಿರಹಟ್ಟಿಮಠದ ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಆಗ್ರಹಿಸಿದರು.

ಮೂರುಸಾವಿರಮಠದ ಆವರಣದಲ್ಲಿ ವಿವಿಧ ಸ್ವಾಮೀಜಿಗಳೊಂದಿಗೆ ಚಿಂತನ ಮಂಥನ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಬದಲಾವಣೆ ಆಗದಿದ್ದರೇ ಎಪ್ರಿಲ್ 2 ರಂದು ಮತ್ತೊಮ್ಮೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದರು‌.

ಪ್ರಲ್ಹಾದ್ ಜೋಶಿ ಅವರಿಗೆ ಅಧಿಕಾರ ಮತ್ತು ಸಂಪತ್ತಿನ ಮದವೇರಿದ್ದು, ಲಿಂಗಾಯತ, ಕುರುಬ ಸೇರಿದಂತೆ ಎಲ್ಲ ಸಮೂದಾಯವನ್ನು ತುಳಿದಿದ್ದಾರೆ. ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ. ನಮ್ಮ ವಿರೋಧ ಅವರ ವ್ಯಕ್ತಿತ್ವಕ್ಕೆ ಹೊರತು ಪಕ್ಷ ಅಥವಾ ಸಮಾಜಕ್ಕೆ ಅಲ್ಲ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments