Monday, December 16, 2024
spot_img
Homeರಾಜಕೀಯಬೆಂಗಳೂರು ಬಳಿ ವಿಶೇಷ ನಗರ ಸ್ಥಾಪನೆ: KHIR ಮೊದಲ ಹಂತಕ್ಕೆ ಆ.23ಕ್ಕೆ ಚಾಲನೆ

ಬೆಂಗಳೂರು ಬಳಿ ವಿಶೇಷ ನಗರ ಸ್ಥಾಪನೆ: KHIR ಮೊದಲ ಹಂತಕ್ಕೆ ಆ.23ಕ್ಕೆ ಚಾಲನೆ

ಬೆಂಗಳೂರು, ಆಗಸ್ಟ್ 04: ಕರ್ನಾಟಕ ರಾಜ್ಯ ಸರ್ಕಾರ ‘ನಾಲೆಡ್ಜ್, ಹೆಲ್ತ್ ಇನ್ನೋವೇಶನ್ ಮತ್ತು ರೀಸರ್ಚ್ ಸಿಟಿ’ (KHIR city) ಯನ್ನು ಬರೋಬ್ಬರಿ 2,000 ಎಕರೆಯಲ್ಲಿ ನಿರ್ಮಿಸಲು ಉದ್ದೇಶ ಹಾಕಿಕೊಂಡಿದೆ. ಹಂತ ಹಂತವಾಗಿ ಅಭಿವೃದ್ಧಿಗೆ ಸಜ್ಜಾಗಿರುವ ಸರ್ಕಾರ ಇದೇ ಆಗಸ್ಟ್ 23ರ ಶುಕ್ರವಾರ ಮೊದಲ ಹಂತದಲ್ಲಿ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲಿದೆ.

ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ದೇಶದದಲ್ಲೇ ಮೊದಲ ಎನ್ನಲಾದ ಕೆಎಚ್‌ಐಆರ್ ಸಿಟಿ ಬೆಂಗಳೂರಿನ್ಲಲಿ ನಿರ್ಮಾಣವಾಗುತ್ತಿದೆ. ಇದರ ಮೇಲೆ ಹೆಚ್ಚು ನಿರೀಕ್ಷೆಗಳು ಇವೆ. ಬೆಂಗಳೂರಿನಿಂದ 60 ಕಿಮೀ. ದೂರದಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹೊಸ ನಗರ ತಲೆ ಎತ್ತಲಿದೆ.

ಮೊದಲು 1000 ಎಕರೆ ಎನ್ನಲಾಗಿತ್ತು. ಇದೀಗ ಒಟ್ಟು 2,000 ಎಕರೆಯಲ್ಲಿ ಕೆಎಚ್ಐಆರ್ ಸಿಟಿ ಅಭಿವೃದ್ಧಿಗೊಳಿಸಲಿದ್ದೇವೆ. ಆರಂಭಿಕದ ಹಂತದಲ್ಲಿ 200ರಿಂದ 300 ಎಕರೆಯಲ್ಲಿ ನಗರ ನಿರ್ಮಿಸಲಾಗುವುದು. ಮೊದಲು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಯೋಜನೆ ಸಾಕಾರಗೊಳ್ಳಲಿದೆ ಎಂದು ತಿಳಿಸಿದರು.

ವಿಶ್ವದ ಬೇರೆಡೆಗೂ ‘ವಿಶೇಷ ನಗರದ’ ಪರಿಕಲ್ಪನೆ

ಬರೋಬ್ಬರಿ ರೂ.40,000 ಕೋಟಿಗೂ ಅಧಿಕ ಹೂಡಿಕೆಗೆ ಇಲ್ಲಿಗೆ ಹರಿದು ಬರಲಿದೆ. ಸುಮಾರು 50,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿವೆ. ವಿಶ್ವದ ಇನ್ನಿತರ ಭಾಗಗಳಲ್ಲಿಯೂ ವಿಶೇಷ ನಗರಗಳ ಪರಿಕಲ್ಪನೆ ಶುರುವಾಗಿದೆ. ಕೇಂದ್ರವು ಸಹ ಇದೇ ಮಾದರಿಯಲ್ಲಿ ಚಿಂತನೆ ನಡೆಸಿದೆ. ಬೆಂಗಳೂರಿನ ಕೆಎಚ್ಐಆರ್ ಸಿಟಿಯಲ್ಲಿ ನಾಲ್ಕೂ ವಲಯಗಳಲ್ಲಿನ ಜಾಗತಿಕ ಮಟ್ಟದ ಅತ್ಯುನ್ನತ ಕಂಪನಿಗಳು ನೆಲೆ ಊರಲಿವೆ ಎಂದು ಸಚಿವರು ತಿಳಿಸಿದರು.

ಇನ್ನೂ ಈ ಬೃಹತ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಅಲ್ಲದೇ ಉದ್ಯಮ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ. 2000 ಎಕರೆ ಪೈಕಿ ಮೊದಲ ಹಂತದಲ್ಲಿ 1000 ಎಕರೆಯಲ್ಲಿ ಕೆಲಸ ಆರಂಭಿಸಲು ಸರ್ಕಾರ ಚಾಲನೆ ನೀಡಲಿದೆ ಎಂದರು.

ಆರ್ಥಿಕತೆ ಏರಿಕೆ, ರಫ್ತು ವಹಿವಾಟು ವೃದ್ಧಿ

ನೂತನ ಸಿಟಿ ನಿರ್ಮಾಣ, ಕಾಮಗಾರಿಗೆ, ಮೂಲ ಸೌಕರ್ಯ ಎಲ್ಲವನ್ನು ರಾಜ್ಯ ಸರ್ಕಾರ ಪೂರೈಸಲಿದೆ. ಭವಿಷ್ಯದಲ್ಲಿ ಇದರಿಂದ ಆರ್ಥಿಕ ವರಮಾನ ಹೆಚ್ಚಳದ ಜೊತೆಗೆ ರಫ್ತು ವಹಿವಾಟು ಕೂಡ ವೃದ್ಧಿಸಲಿದೆ. ಇದರಿಂದಾಗಿ ಬೆಂಗಳೂರು ನಗರವು ಇನ್ನೊಂದು ಸ್ತರ ಮೇಲೇರಲಿದೆ ಎಂದು ಅವರು ಹೇಳಿದ್ದಾರೆ.

ಜಾಗತಿಕವಾಗಿ ಉತ್ಕೃಷ್ಟ ಮಟ್ಟದ ಉದ್ದಿಮೆಗಳು, ವಿಶ್ವವಿದ್ಯಾಲಯಗಳು, ಮೆಡಿಕಲ್ ಟೂರಿಸಂ, ಸಂಶೋಧನೆ, ಚಿಕಿತ್ಸೆ, ನಾವೀನ್ಯತೆ ಇವುಗಳಿಗೆ ಉದ್ದೇಶಿತ ಸಿಟಿಯಲ್ಲಿ ಆದ್ಯತೆ ನೀಡಲಾಗುವುದು. ಜೊತೆಗೆ ಭವಿಷ್ಯದ ಸಂಚಾರ ವ್ಯವಸ್ಥೆ, ಸೆಮಿಕಂಡಕ್ಟರ್, ಅಡ್ವಾನ್ಸ್ಡ್ ಮೆಟೀರಿಯಲ್ಸ್, ನವೋದ್ಯಮಗಳು, ವೈಮಾಂತರಿಕ್ಷ, ರಕ್ಷಣೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಜೀವವಿಜ್ಞಾನಗಳು ಮತ್ತು ಆಧುನಿಕ ತಂತ್ರಜ್ಞಾನ ವಲಯಗಳ ಕಂಪನಿಗಳು ಕೂಡ ಇಲ್ಲಿ ಬರಲಿವೆ.

ಮುಖ್ಯವಾಗಿ ಒಟ್ಟಾರೆ ಯೋಜನೆಯಿಂದ ಅಪಾರ ಸಂಖ್ಯೆಯ ಪರೋಕ್ಷ ಉದ್ಯೋಗಗಳು ಕೂಡ ಸೃಷ್ಟಿಯಾಗಲಿವೆ. ಇದರಿಂದ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಇದಕ್ಕಾಗಿ ಸರಕಾರವು ಸ್ಪಷ್ಟ ರೂಪುರೇಷೆಯನ್ನು ಈಗಾಗಲೇ ಆಖೈರುಗೊಳಿಸಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments