ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ರಾಜ್ಯ ಮಟ್ಟದ ಹೆಣ್ಣು ಮಕ್ಕಳ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 68 ಕೆ.ಜಿ ವಿಭಾಗದಲ್ಲಿ ಎ.ಜಿ.ಎಂ ಇಂಜಿನಿಯರಿಂಗ್ ಮಹಾವಿದ್ಯಾಲಯ ವರೂರು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿಯಾದ ಕು.ಭಾವನಾ ಭಾಗವಹಿಸಿ ತೃತೀಯ ಬಹುಮಾನ ಜೊತೆಗೆ ಕಂಚಿನ ಪದಕವನ್ನು ಪಡೆದಿದ್ದಾರೆ.
ಪದಕ ವಿಜೇತ ಕ್ರೀಡಾಪಟುವಿಗೆ ಎ.ಜಿ.ಎಂ.ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಪರಮ ಪೂಜ್ಯ ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರು ಹಾಗೂ ಅಧ್ಯಕ್ಷರಾದ ಪರಮ ಪೂಜ್ಯ ಸ್ವಸ್ತಿ ಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು ಮತ್ತು ಸಂಸ್ಥೆಯ ನಿರ್ದೇಶಕರಾರ ಪ್ರೊ.ಸಂದೀಪ ಕ್ಯಾತನವರ ಪದಕ ವಿಜೇತ ಕ್ರೀಡಾಪಟುವಿಗೆ ಶುಭ ಹಾರೈಸಿದರು. ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು, ನಿರ್ದೇಶಕರ ಸಹಾಯ ಮತ್ತು ಸಹಕಾರದಿಂದ ಈ ಸಾಧನೆಯನ್ನು ಮಾಡಲು ಸಹಾಯವಾಯಿತ್ತೆಂದು ಪದಕ ವಿಜೇತ ಕ್ರೀಡಾಪಟು ಅಭಿಪ್ರಾಯ ಹಂಚಿಕೊಂಡರು. ಜೊತೆಗೆ ಕ್ರೀಡಾಪಟುವಿಗೆ ಸಂಸ್ಥೆಯ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದರು