ಧಾರವಾಡ ಕೃಷಿ ವಿಶ್ವ ವಿದ್ಶಾಲಯ ಧಾರವಾಡ ಇದರ ಕೃಷಿ ಮೇಳ 2024 ಇಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಸಿರಿ ಮಿಲೆಟ್ ಮಳಿಗೆ ಇದರ ಉದ್ಘಾಟನೆಯನ್ನು ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆಯ ಧಾರವಾಡ ಜಿಲ್ಲಾ ಅಧ್ಶಕ್ಷರಾದ ಸಂತೋಷ್ ಆರ್ ಶೆಟ್ಟಿಯವರು ಉದ್ಘಾಟಿಸಿದರು.ಇವರು ಮಾತನಾಡಿ ಕೃಷಿ ಮೇಳದಲ್ಲಿ ಜನಮನ ಸೆಳೆಯುವ ವಿಶೇಷ ಆಕರ್ಷಣೆಯ ಮಳಿಗೆ ಆಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಸಿರಿ ಮಿಲೆಟ್ ನಿರ್ದೇಶಕರಾದ ದಿನೇಶ್ ಎಂ ರವರು ಮಾತನಾಡಿ ಕೃಷಿ ಮೇಳವು ರೈತರ ಜಾತ್ರೆ ಆಗಿದ್ದು ಸಿರಿಧಾನ್ಶಗಳನ್ನು ರೈತರಲ್ಲಿ ಬೆಳೆಯುವಲ್ಲಿ ಪ್ರೇರಣೆ ಆಗಬೇಕು ಹಾಗೂ ಪೌಷ್ಠಿಕಯುತವಾದ ಧಾನ್ಶಗಳು ಆಹಾರವಾಗಿ ಬಳಕೆ ಮಾಡುವುದರಿಂದ ಆರೋಗ್ಶಯುತ ಸಮಾಜ ನಿರ್ಮಾಣ ಆಗಬೇಕು ಎಂಬುದು ಧರ್ಮಸ್ಥಳ ಧರ್ಮಾಧಿಕಾರಿಯವರು ಪೂಜ್ಶ ಡಾ.ವೀರೇಂದ್ರ ಹೆಗ್ಗಡೆಯವರ ಆಶಯ ಆಗಿದೆ. ಈ ನೆಲೆಯಲ್ಲಿ ಸಿರಿಧಾನ್ಶಗಳ ಜಾಗ್ರತಿ ಮೂಡಿಸಲು ಮಳಿಗೆ ಹಾಕಲಾಗಿದೆ ಎಂದರು.
ಈ ಸಂದರ್ಭ ಸಿರಿ ಸಿ.ಸಿ.ಓ ಗಣೇಶ್ ಪ್ರಸಾದ್ ಕಾಮತ್ ˌ ಯೋಜನಾಧಿಕಾರಿಗಳಾದ ಮಾಲತೇಶ್ ˌ ಕಾಂತಪ್ಪ ˌ ಪ್ರತಾಪ್ ˌ ಅರುಣಾ ತಿಮ್ಮಾಪುರ ಇವರು ಉಪಸ್ಥಿತರಿದ್ದರು.