Monday, December 23, 2024
spot_img
Homeನ್ಯೂಸ್ಇನ್ಸ್ಟಾಗ್ರಾಮ್‌ ಪ್ರೀತಿಗೆ ರೋಚಕ ಟ್ವಿಸ್ಟ್: ಒಂದಲ್ಲ, ಎರಡಲ್ಲ..12 ಕೋಟಿ ಒಡತಿಗೆ ಇದು ಮೂರನೇ ಮದುವೆ..!!

ಇನ್ಸ್ಟಾಗ್ರಾಮ್‌ ಪ್ರೀತಿಗೆ ರೋಚಕ ಟ್ವಿಸ್ಟ್: ಒಂದಲ್ಲ, ಎರಡಲ್ಲ..12 ಕೋಟಿ ಒಡತಿಗೆ ಇದು ಮೂರನೇ ಮದುವೆ..!!

ಬೆಳಗಾವಿ, ಆಗಸ್ಟ್ 01: ಇನ್ಸ್ಟಾಗ್ರಾಮ್‌ನಲ್ಲಿ ಪ್ರೀತಿ ಆಯ್ತು. ಮನೆಯ ವಿರೋಧದ ನಡುವೆ ಈತನನ್ನು ಮದುವೆಯಾಗಿದ್ದೇನೆ. 12 ಕೋಟಿ ಆಸ್ತಿ ಇದ್ದರೂ ಅದನೆಲ್ಲಾ ಬಿಟ್ಟು ಈತನಿಗಾಗಿ ಬಂದಿದ್ದೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ ಬೆಂಗಳೂರಿನ ಮಹಿಳೆಗೆ ಇದು ಮೂರನೇ ಮದುವೆ ಎನ್ನುವ ಸತ್ಯ ಸದ್ಯ ಬೆಳಕಿಗೆ ಬಂದಿದೆ

ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿ ಹುಟ್ಟಿ ಬೆಳಗಾವಿಗೆ ಬಂದು ಖಾನಾಪುರ ತಾಲೂಕಿನ ರೋಹಿತ್ ಕೋಲಕಾರ ಎಂಬಾತನನ್ನು ಪ್ರಿಯಾಂಕಾ ಗೌಡ ( 24 ) ಎನ್ನುವ ಯುವತಿಯೊಬ್ಬಳು ಮದುವೆಯಾಗಿದ್ದಳು. ಬೆಂಗಳೂರಿನಲ್ಲಿ ನನ್ನದು ಸ್ವಂತ ಮನೆ, ಸೈಟ್ ಇದೆ. ಬರೋಬ್ಬರಿ 12 ಕೋಟಿ ಮೌಲ್ಯದ ನನ್ನ ಆಸ್ತಿ ಹೊಡೆಯಲು ನಮ್ಮ ಸಂಬಂಧಿಕರು ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿದ್ದ ಪ್ರಿಯಾಂಕಾ ಬೆಳಗಾವಿ ಎಸ್ಪಿ ಕಚೇರಿಗೆ ಬಂದು ದೂರು ನೀಡಿದ್ದಳು. ಈ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಈ ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿದ್ದು, ಪ್ರಿಯಾಂಕಾ ಗೌಡಗೆ ಇದು ಮೂರನೇ ಮದುವೆ ಎನ್ನುವುದು ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ ಏನು..?

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಪರಸ್ಪರ ಪ್ರೀತಿಸಿ ಮದುವೆಗೆ ಮುಂದಾಗಿದ್ದ ಯುವಕ, ಯುವತಿಯು ಕುಟುಂಬಸ್ಥರಿಂದ ರಕ್ಷಣೆ ಕೋರಿ ಒಂದೂವರೆ ತಿಂಗಳ ಹಿಂದೆ ಖಾನಾಪುರ ಪೊಲೀಸರಿಗೆ ಮನವಿ ಮಾಡಿದ್ದರು. ಸೋಮವಾರ ಪಾರಿಶ್ವಾಡದ ದೇವಸ್ಥಾನವೊಂದರಲ್ಲಿ ಮದುವೆಯಾದರು. ಮದುವೆಯಾದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರ ಬಳಿ ಬಂದು ರಕ್ಷಣೆ ನೀಡುವಂತೆ ಕೋರಿದ್ದಾರೆ.

ಜೀವಭಯವಿದೆ ರಕ್ಷಣೆ ಕೊಡಿ ಎಂದೂ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು, ರಕ್ಷಣೆ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆಸ್ತಿ ದಾಖಲೆಗಳಿಗೆ ಸಂಬಂಧಿಸಿದಂತೆ ಸಂಬಂಧಿತ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿ ಕಳೆದುಕೊಂಡಿರುವ ಯುವತಿ ಸೋದರ ಮಾವನ ಆಶ್ರಯದಲ್ಲಿ ಬೆಳೆದಿದ್ದಾಳೆ. ಯುವತಿತಂದೆ ಹೆಸರಲ್ಲಿ ಬೆಂಗಳೂರಿನಲ್ಲಿ ಮನೆ, ಕಾಂಪ್ಲೆಕ್ಸ್ ಹಾಗೂ ಶಿವಮೊಗ್ಗದಲ್ಲಿ ಮೂರು ಮನೆಗಳಿದ್ದು, ಎಲ್ಲವನ್ನೂ ಸಂಬಂಧಿಕರು ನೋಡಿಕೊಳ್ಳುತ್ತಿದ್ದಾರೆ. ನನಗೆ 18 ವರ್ಷ ವಯಸ್ಸಾದ ಬಳಿಕ ಆಸ್ತಿಯ ಮಾಲೀಕತ್ವ ನನ್ನ ಹೆಸರಿಗೆ ವರ್ಗಾವಣೆಯಾಗಿದೆ.

ಆಸ್ತಿ ಆಸೆಗಾಗಿ ಸೋದರ ಮಾವನ ಮಗ ಸುಧಾಕರ್‌ ಎಂಬಾತ ಬಲವಂತದಿಂದ ನನ್ನ ಆಧಾರ ಕಾರ್ಡ್‌ನಲ್ಲಿ ಹೆಸರು ಬದಲಾಯಿಸಿದ್ದಾನೆ. ನಾನು ಯುವಕನನ್ನು ಪ್ರೀತಿಸುವ ವಿಷಯ ತಿಳಿದು ನನ್ನನ್ನು ಗೃಹಬಂಧನ ದಲ್ಲಿಟ್ಟಿದ್ದರು ಎಂದು ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ ಶಾಕ್‌ ಆಗಿದ್ದು, ಪ್ರಿಯಾಂಕಾ ಗೌಡಗೆ ಇದು ಮೂರನೇ ಮದುವೆಯಾಗಿದೆ. ಪೊಲೀಸರ ಬಳಿ ಸ್ವತಃ ಪ್ರಿಯಾಂಕಾ ಇದನ್ನು ಒಪ್ಪಿಕೊಂಡಿದ್ದು, ಬೆಳಗಾವಿಯಿಂದ ಬೆಂಗಳೂರಿಗೆ ವಾಪಸ್‌ ತೆರಳುವಾಗ ಪೊಲೀಸರಿಗೆ ನೀಡಿದ ಹೇಳಿಕೆ ಪತ್ರದಲ್ಲಿ ಸುಧಾಕರ್‌ ನನ್ನ ಗಂಡ ನಾನು ಅವನ ಜೊತೆಗೆ ತೆರಳುತ್ತಿದ್ದೇನೆ. ಯಾವುದೇ ಒತ್ತಾಯ ಇಲ್ಲ ಎಂದು ಬರೆದು ಸಹಿ ಹಾಕಿ ನೀಡಿರುವ ಪತ್ರ ವೈರಲ್‌ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments