Wednesday, December 18, 2024
spot_img
Homeಸಿನಿಮಾಹಾಟ್​​ ಲುಕ್​ನಲ್ಲಿ ಕಾಣಿಸಿಕೊಂಡ ನಮ್ರತಾ ಗೌಡ​​; ಈ ಸೌಂದರ್ಯಕ್ಕೆ ನಾ ತಲೆಬಾಗುವೆ ಎಂದ ಅಭಿಮಾನಿ​

ಹಾಟ್​​ ಲುಕ್​ನಲ್ಲಿ ಕಾಣಿಸಿಕೊಂಡ ನಮ್ರತಾ ಗೌಡ​​; ಈ ಸೌಂದರ್ಯಕ್ಕೆ ನಾ ತಲೆಬಾಗುವೆ ಎಂದ ಅಭಿಮಾನಿ​

•ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ಈ ಕಿರುತೆರೆ ನಟಿ

•ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಹಾಟ್​ ಫೋಟೋಸ್​

•ಗ್ಲಾಮಸರ್​ ಲುಕ್​ನಲ್ಲಿ ನೆಟ್ಟಿಗರ ಕಣ್ಮನ ಸೆಳೆದ ಬಿಗ್​ಬಾಸ್​ ಸುಂದರಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಸದ್ಯ ಯಾವುದೇ ಪ್ರಾಜೆಕ್ಟ್ ಕೈ ಹಾಕದ ಕಿರುತೆರೆ ನಟಿ ಸದ್ಯ ಜಾಲಿ ಮೂಡ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಹೊಸ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುವ ಕಿರುತೆರೆ ನಟಿ ನಮ್ರತಾ ಗೌಡ ಈಗ ಗ್ಲಾಮರಸ್ ಫೋಟೋಶೂಟ್​ ಮೂಲಕ ಫ್ಯಾನ್ಸ್​ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾರೆ.

ಹೌದು, ಇಷ್ಟು ದಿನ ಸೀರೆಯಲ್ಲಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದ ನಮ್ರತಾ ಗೌಡ ಇದೀಗ ಸಖತ್​ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ​ ಡ್ರೆಸ್​ನಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಮ್ರತಾ ಗೌಡ ಶೇರ್ ಮಾಡಿಕೊಂಡ ಫೋಟೋಸ್​ಗೆ ಫ್ಯಾನ್ಸ್ ಫುಲ್ ದಂಗಾಗಿದ್ದಾರೆ.

ಪ್ರತಿ ದಿನ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರೋ ನಮ್ರತಾ ಗೌಡ ಅವರು ಮುಂದೆ ಬರೋ ದೊಡ್ಡ ಆಫರ್​ಗಾಗಿ ಎದರು ನೋಡುತ್ತಿದ್ದಾರೆ. ಸೀರಿಯಲ್​ ಹಾಗೂ ಬಿಗ್​ಬಾಸ್​ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡರು. ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಌಕ್ಟೀವ್ ಆಗಿದ್ದಾರೆ. ಸದ್ಯ ಹೊಸದಾಗಿ ಶೇರ್ ಮಾಡಿಕೊಂಡ ಫೋಟೋ ನೋಡಿ ಫ್ಯಾನ್ಸ್ ಕಾಮೆಂಟ್ಸ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಓರ್ವ ಅಭಿಮಾನಿಯೊಬ್ಬರು ಈ ಸೌಂದರ್ಯಕ್ಕೆ ನಾ ತಲೆಬಾಗುವೆ ಎಂದು ಹಾಡಿನ ಸಾಲನ್ನು ಬರೆದು ನಮ್ರತಾ ಗೌಡರ ಲುಕ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments