Sunday, December 22, 2024
spot_img
Homeರಾಜ್ಯBeer Price : ಮತ್ತೊಮ್ಮೆ, ಮಗುದೊಮ್ಮೆ 'ಬಿಯರ್' ದರದಲ್ಲಿ ಭಾರೀ ಏರಿಕೆ: ಈಗ ಬಾಟಲ್‌ಗೆ ಎಷ್ಟು?

Beer Price : ಮತ್ತೊಮ್ಮೆ, ಮಗುದೊಮ್ಮೆ ‘ಬಿಯರ್’ ದರದಲ್ಲಿ ಭಾರೀ ಏರಿಕೆ: ಈಗ ಬಾಟಲ್‌ಗೆ ಎಷ್ಟು?

Beer Prices Hiked Again : ಮದ್ಯಪ್ರಿಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಕಳೆದ ಹದಿನೇಳು ತಿಂಗಳಲ್ಲಿ ಐದನೇ ಬಾರಿಗೆ ಮದ್ಯದ ದರದಲ್ಲಿ ಏರಿಕೆಯಾಗಿದೆ. ಬಿಯರ್ ಪ್ರಿಯರು ಇನ್ನು ಮುಂದೆ ಬಾಟಲ್ ವೊಂದಕ್ಕೆ ಕನಿಷ್ಠ ಐದರಿಂದ ಗರಿಷ್ಠ ಇಪ್ಪತ್ತು ರೂಪಾಯಿವರೆಗೆ ಹೆಚ್ಚು ಪಾವತಿಸಬೇಕಿದೆ.

  • ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದನೇ ಬಾರಿಗೆ ಮದ್ಯದ ಬೆಲೆ ಏರಿಕೆ
  • ಬಿಯರ್ ಬಾಟಲ್ ವೊಂದಕ್ಕೆ ಐದರಿಂದ ಇಪ್ಪತ್ತು ರೂಪಾಯಿವರೆಗೆ ಏರಿಕೆ
  • ಗ್ಯಾರಂಟಿ ಯೋಜನೆಗಳಿಂದ ಸತತವಾಗಿ ಜನಸಾಮಾನ್ಯರ ಜೇಬುಗೆ ಕತ್ತರಿ
ಬೆಂಗಳೂರು : ಕೇಂದ್ರದ ಆಯವ್ಯಯವಿರಲಿ, ರಾಜ್ಯ ಬಜೆಟ್ ಇರಲಿ, ಮದ್ಯ ಮತ್ತು ತಂಬಾಕು ಉತ್ಪನ್ನಗಳ ಬೆಲೆಯನ್ನು ಎಲ್ಲಾ ಸರ್ಕಾರ ಏರಿಸಿಕೊಂಡು ಬರುತ್ತಲೇ ಇರುತ್ತವೆ. ಆದರೆ, ಕರ್ನಾಟಕದಲ್ಲಿ ಹಿಂದೆಂದೂ ಕಂಡದ್ದು ಅಪರೂಪ ಎನ್ನುವಂತೆ ಐದನೇ ಬಾರಿಗೆ ಮದ್ಯದ ಬೆಲೆ, ಕಳೆದ 17 ತಿಂಗಳಲ್ಲಿ ಏರಿಕೆಯಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಇಂಧನದ ಬೆಲೆ ಲೀಟರ್ ಒಂದಕ್ಕೆ ಮೂರು ರೂಪಾಯಿ ಜಾಸ್ತಿಯಾಗಿತ್ತು. ಇದಾದ ನಂತರ, ಹಾಲಿನ ಪ್ರಮಾಣವನ್ನು ಹೆಚ್ಚಿಸಿ ಬೆಲೆಯನ್ನು ಜಾಸ್ತಿ ಮಾಡಲಾಗಿತ್ತು. ಈಗ, ಮದ್ಯದ ಬೆಲೆ. ಎಲ್ಲಾ ಬ್ರಾಂಡ್ ಗಳ ಬಿಯರ್ ಬೆಲೆ ಜಾಸ್ತಿಯಾಗಿದೆ.
ಒಂದು ತಿಂಗಳ ಹಿಂದೆಯಷ್ಟೇ ಬಿಯರ್ ಬೆಲೆಯನ್ನು ಏರಿಕೆಯಾಗಿತ್ತು, ಈಗ ಮತ್ತೆ ಬಿಯರ್ ಪ್ರಿಯರಿಗೆ ಬಿಸಿತಟ್ಟಿದೆ. ಕೆಲವೊಂದು ಬ್ರ್ಯಾಂಡ್ ಗಳ ಬೆಲೆ ಕಮ್ಮಿಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ, ಬೆಲೆ ಏರಿಕೆ ಶಾಕ್ ನೀಡಿದೆ.

 

ಬಿಯರ್ ಬೆಲೆ ಬಾಟಲ್ ವೊಂದಕ್ಕೆ (ಆಯಾಯ ಬ್ರ್ಯಾಂಡ್ ಆಧರಿಸಿ) ಐದರಿಂದ ಇಪ್ಪತ್ತು ರೂಪಾಯಿವರೆಗೆ ಏರಿಕೆಯಾಗಿದೆ. ಕೆಲವೊಂದು ಕಡೆ, ಕಳೆದ ವಾರದಿಂದಲೇ ಪರಿಷ್ಕೃತ ದರವನ್ನು ಗ್ರಾಹಕರಿಂದ ತೆಗೆದುಕೊಳ್ಳಲಾಗಿದೆ. ಹೊಸ ದರ ಜುಲೈ 30 ಅಥವಾ 31ರಿಂದ ಜಾರಿಗೆ ಬರಬಹುದು.

ಪಂಚ ಗ್ಯಾರಂಟಿಗಳಿಗೆ ವಾರ್ಷಿಕವಾಗಿ ಸುಮಾರು 56 ಸಾವಿರ ಕೋಟಿ ರೂಪಾಯಿಯನ್ನು ಹೊಂದಿಸುವ ಅನಿವಾರ್ಯತೆಯಲ್ಲಿ ಸಿದ್ದರಾಮಯ್ಯ ಸರ್ಕಾರವಿದೆ. ಬಿಯರ್ ಮೇಲೆ ಶೇ. 20 ಸುಂಕವನ್ನು ವಿಧಿಸಿತ್ತು. ಈ ಹಿನ್ನಲೆಯಲ್ಲಿ, ಮದ್ಯ ತಯಾರಿಕಾ ಕಂಪೆನಿಗಳು ಬಾಟಲ್ ವೊಂದರ ದರವನ್ನೂ ಹೆಚ್ಚಿಸಿತ್ತು.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಯರ್ ಬಾಟಲ್ ವೊಂದರ ದರ 50 ರಿಂದ 60 ರೂಪಾಯಿವರೆಗೆ ಏರಿಕೆಯಾಗಿದೆ. ಸುಂಕವನ್ನು ಹೆಚ್ಚಿಸಿದ್ದರಿಂದ ಉತ್ಪಾದನಾ ವೆಚ್ಚ ಹೆಚ್ಚಾಯಿತು ಎಂದು ದರವನ್ನು ಮದ್ಯ ತಯಾರಿಕಾ ಕಂಪೆನೆಗಳು ಏರಿಸಿದ್ದವು.
ಈಗ, ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು, ಮತ್ತೆ ಮದ್ಯದ ಬೆಲೆಯನ್ನು ಜಾಸ್ತಿ ಮಾಡಲಾಗಿದೆ. ಬೆಲೆ ಏರಿಕೆಯ ಅನಿವಾರ್ಯತೆಯಲ್ಲಿ ಇದ್ದೇವೆ ಎಂದು ಮದ್ಯ ತಯಾರಿಕಾ ಕಂಪೆನಿಗಳು ಹೇಳಿಕೊಂಡಿವೆ.

ವಾಣಿಜ್ಯ ವಾಹನಗಳ ಮೇಲೆ ಸೆಸ್ ಹೆಚ್ಚಳ, ಸ್ಟ್ಯಾಂಪ್ ಡ್ಯೂಟಿಯಲ್ಲಿ ಭಾರೀ ಏರಿಕೆ, ಮದ್ಯದ ಮೇಲೆ ಸುಂಕ ಹೆಚ್ಚಳ, ಬಿತ್ತನೆ ಬೀಜಗಳ ಬೆಲೆ ಏರಿಕೆ, ಇಂಧನದ ಮೇಲೆ ಸೆಸ್.. ಈ ರೀತಿಯ ಏರಿಕೆಯನ್ನು ಹಾಲೀ ಸರ್ಕಾರ ಮಾಡುತ್ತಲೇ ಬರುತ್ತಿದೆ.

ಕೆಲವು ದಿನಗಳ ಹಿಂದೆ, ಮುಖ್ಯಮಂತ್ರಿಗಳು ಅಬಕಾರೀ ಇಲಾಖೆಯ ಸಭೆಯನ್ನು ಕರೆದಿದ್ದರು. ಮದ್ಯದ ಮಾರಾಟ ಹೆಚ್ಚಿಸಲು, ಹೆಚ್ಚುವರಿ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿ, ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ನಿರ್ಧರಿಸುವ ಸಾಧ್ಯತೆಯಿತ್ತು. ಆದರೆ, ಉತ್ಪಾದನಾ ವೆಚ್ಚದ ಮಾಹಿತಿಯನ್ನು ಸರ್ಕಾರಕ್ಕೆ ನೀಡಲು ಕಂಪೆನಿಗಳು ತೀವ್ರ ವಿರೋಧವನ್ನು ವ್ಯಕ್ತ ಪಡಿಸಿದ್ದವು. ಹಾಗಾಗಿ, ಪ್ರೀಮಿಯಂ ಮದ್ಯಗಳ ಬೆಲೆಯಲ್ಲಿ ಇಳಿಕೆಯಾಗಿರಲಿಲ್ಲ.

 

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments