Sunday, December 22, 2024
spot_img
Homeನ್ಯೂಸ್ಸುಳ್ಳ ಗ್ರಾಮದಲ್ಲಿ ಶ್ರೀ ರಾಮ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪದಗ್ರಹಣ ಕಾರ್ಯಕ್ರಮ

ಸುಳ್ಳ ಗ್ರಾಮದಲ್ಲಿ ಶ್ರೀ ರಾಮ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪದಗ್ರಹಣ ಕಾರ್ಯಕ್ರಮ

ಹುಬ್ಬಳ್ಳಿ: ಶ್ರೀ ರಾಮ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಹುಬ್ಬಳ್ಳಿ ತಾಲೂಕಾ ಘಟಕ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಇಂದು ಸುಳ್ಳ ಗ್ರಾಮದ ಸಿದ್ದಾರೋಡ ಮಠದ ಆವರಣದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ರಾಜ್ಯಾದ್ಯಕ್ಷರಾದ ಶ್ರೀ ಗುರು ಪಾಟೀಲ್ ಮಾತನಾಡಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಮ್ಮ ಸಂಘ ಕಾರ್ಯನಿರ್ವಹಣೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಸಂಘಟನೆ ಮುಖಾಂತರ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವದು ಮತ್ತು ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನಮ್ಮ ಪ್ರಥಮ ಆದ್ಯತೆಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಾದ್ಯಕ್ಷರಾದ ಶ್ರೀ ಗುರು ಪಾಟೀಲ್ ಉಪಾಧ್ಯಕ್ಷ ಶ್ರೀ ವಿರುಪಾಕ್ಷಪ್ಪ ಪಾಯಣ್ಣವರ ,ಮುಖ್ಯ ಅತಿಥಿಗಳಾಗಿ ಶ್ರೀ ಶಿವಕಲ್ಲಪ್ಪ ದೇಮಕ್ಕನವರ ,ಪ್ರವೀಣ ನವಲಗುಂದ ,ರಾಜ್ಯ ಕಾರ್ಯದರ್ಶಿ ಶ್ರೀ ಈರಣ್ಣ ಉಳ್ಳಾಗಡ್ಡಿ ,ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಮೊದ ಅಂಕಲಕೋಟಿ ,ಜಿಲ್ಲಾ ಅಧ್ಯಕ್ಷ ವಿರುಪಾಕ್ಷಪ್ಪ ಮಣ್ಣೊರ ,ಕಾರ್ಯದರ್ಶಿ ಶ್ರೀ ಮೈಲಾರಿ ತಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶ್ರೀಮತಿ ಶೃತಿ ಗಣೇಶ ಹಿರೇಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments