ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇರುವ ಚಂದನ್ ಶೆಟ್ಟಿ ಡಾನ್ಸ್ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ನಿವೇದಿತಾಗೆ ರಿವೆಂಜಾ ಅಂತಾ ಪ್ರಶ್ನೆ ಕೇಳಿದ್ದಾರೆ. ವಿಚ್ಛೇದನದ ನಂತ್ರ ರ್ಯಾಪರ್ ಚಂದನ್ ಶೆಟ್ಟಿ ಧೂಳೆಬ್ಬಿಸಿದ್ದಾರೆ. ಅವರ ಡಾನ್ಸ್ ವಿಡಿಯೋ ಒಂದು ಫುಲ್ ವೈರಲ್ ಆಗ್ತಿದೆ. ನಾಲ್ಕು ಹುಡುಗಿಯರ ಜೊತೆ ಚಂದನ್ ಶೆಟ್ಟಿ ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದಾರೆ.
ಅವರ, ನೀ ಹಾಕೊಂಡಿರೋ ಬಟ್ಟೆ ನಾ ನೋಡಿ ಸ್ಟನ್ನಾಗ್ ಬಿಟ್ಟೆ ಹಾಡಿಗೆ ಚಂದನ್ ಡಾನ್ಸ್ ಮಾಡಿದ್ದಾರೆ.ಇದನ್ನು ನೋಡಿದ ಅಭಿಮಾನಿಗಳು ಇದು ಇದು ನಿಜವಾಗ್ಲೂ ಚೆನ್ನಾಗಿರೋದು ಅಂತ ಕಮೆಂಟ್ ಮಾಡಿದ್ದಾರೆ. ನಿವೇದಿತಾ ವಿಚ್ಛೇದನದ ನಂತ್ರ ಚಂದನ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಒಂದಾದ್ಮೇಲೆ ಒಂದು ಹೇಳಿಕೆ ನೀಡ್ತಿರುವ ಚಂದನ್ ಅವರ ಶಾರ್ಟ್ಸ್ ಒಂದು ವೈರಲ್ ಆಗಿದೆ. ಈ ಹಿಂದೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಒಟ್ಟಿಗೆ ಒಂದಿಷ್ಟು ವಿಡಿಯೋ ಮಾಡಿದ್ದರು.
ಮತ್ತೆ ಕೆಲ ಅಭಿಮಾನಿಗಳು ಇದು ನಿವೇದಿತಾಗೆ ರಿವೆಂಜಾ ಅಂತ ಪ್ರಶ್ನೆ ಕೇಳಿದ್ದಾರೆ. ಚಂದನ್ ನೀವು ಡಾನ್ಸ್ ಮಾಡಿ ಆ ಕಡೆ ನಿವೇದಿತಾ ಉರಿದುಕೊಳ್ಳಲಿ ಅಂತ ಕಮೆಂಟ್ ಮಾಡಿದ ಅಭಿಮಾನಿಗಳ ಸಂಖ್ಯೆಯೂ ಸಾಕಷ್ಟಿದೆ. ಇಷ್ಟರ ಮಧ್ಯೆ ಅಭಿಮಾನಿಯೊಬ್ಬರು, ಹುಡುಗಿರು ಕ್ಯೂಟ್ ಅಂತ ಮದುವೆ ಆಗ್ಬೇಡಿ ಅಂತ ಸಲಹೆ ಕೂಡ ನೀಡಿದ್ದಾರೆ. ಬೋನಿನಿಂದ ಹೊರ ಬಂದ ಸಿಂಹ ಎನ್ನುವ ಮೂಲಕ ಚಂದನ್ ಶೆಟ್ಟಿಗೆ ಪ್ರೋತ್ಸಾಹ ನೀಡಿದ ಅಭಿಮಾನಿಗಳಿದ್ದಾರೆ.