Sunday, December 22, 2024
spot_img
Homeಸಿನಿಮಾರಚಿತಾ ರಾಮ್ ಮದುವೆ ಫಿಕ್ಸ್; ತೆಲುಗು ನ ಟನ ಜೊತೆ ಮುಂದಿನ ತಿಂಗಳು ಸಿಹಿಸುದ್ದಿ..!

ರಚಿತಾ ರಾಮ್ ಮದುವೆ ಫಿಕ್ಸ್; ತೆಲುಗು ನ ಟನ ಜೊತೆ ಮುಂದಿನ ತಿಂಗಳು ಸಿಹಿಸುದ್ದಿ..!

ಚಂದನವನದ ಪ್ರಖ್ಯಾತ ನಟಿಯಲ್ಲಿ ರಚಿತಾ ರಾಮ್‌ ಕೂಡ ಒಬ್ಬರು. ಕನ್ಯೆಯಾಗಿಯೇ ಉಳಿದಿರುವ ರಚಿತಾ, ಹೋದಲ್ಲಿ ಬಂದಲ್ಲಿ ಮದುವೆ ಯಾವಾಗ ಎಂಬ ಪ್ರಶ್ನೆಗಳನ್ನು ಎದುರಿಸುತ್ತಲೇ ಇದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಚಿತಾ ಮದುವೆ ಸುದ್ದಿ ಈದೀಗ ಮುನ್ನೆಲೆಗೆ ಬಂದಿದೆ. 30 ವರ್ಷವಾದರೂ ನಟಿ ಇನ್ನೂ ಮದುವೆ ಆಗಿಲ್ಲ ಅನ್ನೋದು ಎಲ್ಲರ ದೂರಾಗಿತ್ತು.

ಈ ಹಿಂದೆ ನಡೆಯುತ್ತಿದ್ದ ಸರಿಗಮಪ ಮತ್ತು ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಮಹಾಸಂಚಿಕೆ ಕಾರ್ಯಕ್ರಮದಲ್ಲಿ ರಚಿತಾ ರಾಮ್, ರವಿಚಂದ್ರನ್, ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ ತೀರ್ಪುಗಾರರಾಗಿ ಆಗಮಿಸಿದ್ದರು. ಅದರಲ್ಲಿ ಗಾಯಕಾರದ ಜಸ್​ಕರಣ್ ಸಿಂಗ್ ಮತ್ತು ಅಮೂಲ್ಯ ಅವರು ರಚಿತಾ ರಾಮ್ ಅಭಿಯನದ ಸಿನಿಮಾ ಹಾಡುಗಳನ್ನು ಹಾಡಿದ್ದರು.

ಈ ಹಾಡುಗಳನ್ನು ಕೇಳಿ ಸಂತೋಷ ವ್ಯಕ್ತಪಡಿಸಿದ್ದ ರಚಿತಾ ರಾಮ್, ಹಿಂದಿಯ ಏ ರಾತೇ ಮೌಸಮ್ ಹಾಡು ಹೇಳುವಂತೆ ಕೇಳಿಕೊಂಡರು. ಇನ್ನು ಈ ಹಾಡು ಹಾಡಿದ ಬಳಿಕ, ರಾಣಿ ರಾಜನನ್ನೇ ಮದುವೆ ಆಗಬೇಕು ಅಂತೇನಿಲ್ಲ. ರಾಣಿಯಂತೆ ನೋಡಿಕೊಳ್ಳುವ ನನ್ನನ್ನು ಸಹ ಮದುವೆ ಆಗಬಹುದು ಎಂದು ಗಾಯಕ ಜಸ್​ಕರಣ್ ಸಿಂಗ್ ಹೇಳಿದ್ದಾರೆ.

ಇದನ್ನು ಕೇಳಿಸಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್, ಇದು ಸರಿಯಾದ ಸಮಯ ಅಲ್ಲ, ರಾಂಗ್ ಟೈಮ್ ಅಂದಿದ್ದಾರೆ. ಇಷ್ಟು ಹೇಳುತ್ತಿದ್ದಂತೆ ಜೋರಾಗಿ ನಕ್ಕ ರಚಿತಾ ರಾಮ್, ಶೀಘ್ರದಲ್ಲಿಯೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.  ಇನ್ನು ಈ ಸಂಭಾಷಣೆಯನ್ನು ಗಮನಿಸಿದ ನೆಟ್ಟಿಗರು ರಚಿತಾ ರಾಮ್ ಮದುವೆ ಫಿಕ್ಸ್ ಆಯ್ತಾ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments