ಹುಬ್ಬಳ್ಳಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್) ಸುಳ್ಳ ಗ್ರಾಮ ಘಟಕದ ನೂತನ ಅಧ್ಯಕ್ಷರಾಗಿ ನಾಗಪ್ಪ ಶಿವಪುತ್ರಪ್ಪ ಮಾಳಕೋಟಿ ಅವರು ರವಿವಾರ ಆಯ್ಕೆಯಾದರು.
ನೇಮಕಾತಿ ಪತ್ರ ನೀಡಿ ಮಾತನಾಡಿದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ‘ನೂತನ ಅಧ್ಯಕ್ಷರು ಸಂಘದ ತತ್ವಗಳನ್ನು ಪಾಲಿಸಬೇಕು. ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳದೆ ಎಲ್ಲ ಸಾಮಾಜಿಕ ಪಿಡುಗುಗಳಿಂದ ದೂರವಿದ್ದುಕೊಂಡು ಕಾರ್ಯ ನಿರ್ವಹಿಸಬೇಕು. ಪ್ರಾಮಾಣಿಕತೆಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ನಿಯಮನುಸಾರ ಪರಿಹಾರ ಕ್ರಮ ವಹಿಸಬೇಕು. ತಾಲ್ಲೂಕಿನಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಸಂಘದ ಸಂಘಟನೆಯನ್ನು ಪ್ರಾರಂಭ ಮಾಡಬೇಕು’ ಎಂದು ತಿಳಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಈರಪ್ಪ ಕಂಕೊಳ್ಳಿ,ಕಲ್ಲಪ್ಪ ಜುಂಜನ್ನವರ,ಮುದುಕಪ್ಪ ನಾಗರಳ್ಳಿ,ನಾಗಪ್ಪ ಮುಶಪ್ಪಗೌಡರ್,ಬಸವರಾಜ ಗುಮ್ಮಗೋಳ,ಗುರುಸಿದ್ದಪ್ಪ ಗೌರಿ ಸೇರಿ ಇನ್ನಿತರು ಉಪಸ್ಥಿತರಿದ್ದರು