Tuesday, December 17, 2024
spot_img
Homeಕ್ರೈಂ*ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆ:ಪಿಐ ಎಮ್.ಆರ್.ಚನ್ನಣ್ಣವರ ಆ್ಯಂಡ್ ಟೀಮ್ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಮೆಚ್ಚುಗೆ*

*ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆ:ಪಿಐ ಎಮ್.ಆರ್.ಚನ್ನಣ್ಣವರ ಆ್ಯಂಡ್ ಟೀಮ್ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಮೆಚ್ಚುಗೆ*

ಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ನಾಲ್ಕು ಪ್ರಮುಖ ಗ್ಯಾರೇಜ್‌ಗಳಲ್ಲಿನ ಕಬ್ಬಿಣದ ವಸ್ತುಗಳನ್ನ ದೋಚಿದ್ದ ಮೂವರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿತರನ್ನ ಕರಿಯಪ್ಪ ಚಿನ್ನಪ್ಪ ತಳವಾರ, ಸುನೀಲ ಜಂಬಣ್ಣ ಕಟ್ಟಿಮನಿ ಹಾಗೂ ಸಂಗಮೇಶ ಕರಿಗೌಡ ಬಬಲೇಶ್ವರ ಎಂದು ಗುರುತಿಸಲಾಗಿದ್ದು, ಮೂವರು ಉಣಕಲ್ ಗ್ರಾಮದವರಾಗಿದ್ದಾರೆ.

ಬಂಧಿತರಿಂದ ಒಟ್ಟು 139000 ಮೌಲ್ಯದ ಕಳುವಾದ ಕಬ್ಬಿಣದ ವಸ್ತುಗಳು ಹಾಗೂ ಅದಕ್ಕೆ ಉಪಯೋಗಿಸಿದ ವಾಹನ ವಶಪಡಿಸಿಕೊಳ್ಳಲಾಗಿದೆ.

ಪಿಐ ಎಂ.ಆರ್.ಚೆನ್ನಣ್ಣವರ ನೇತೃತ್ವದಲ್ಲಿ ಪಿಎಸ್ಐಗಳಾದ ವ್ಹಿ.ಎಸ್.ಬೆಳಗಾಂವಕರ, ಸಚಿನ ಆಲಮೇಲಕರ, ಸಿಬ್ಬಂದಿಗಳಾದ ಎಎಸ್ಐ ಎನ್.ಐ.ಹಿರೇಹೋಳಿ, ಎಎಸ್ಐ ಎನ್.ಎಂ. ಹೊನ್ನಪ್ಪನ್ನವರ, ಸಿಎಚ್‌ಸಿ ಸಿ.ಬಿ.ಜನಗಣ್ಣವರ, ಎಚ್‌ಸಿ ಎಚ್.ಎಲ್. ಮಲ್ಲಿಗವಾಡ, ಎಚ್‌ಸಿ ಎ.ಎ.ಕಾಕರ, ಮಾಂತೇಶ ಮದ್ದಿನ, ಚನ್ನಪ್ಪ ಬಳ್ಳೊಳ್ಳಿ, ವಿಶ್ವನಾಥ ಬಡಿಗೇರ, ನಾಗಪ್ಪ ಸಂಶಿ, ನಾಗರಾಜ ಮಾಣಿಕ, ಪ್ರೇಮನಾಥ ರಾಠೋಡ, ಉಮೇಶ ವಡ್ಡರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments