ಹುಬ್ಬಳ್ಳಿ ಕಾ ರಾಜಾ ಎಂದು ಪ್ರಸಿದ್ಧತೆ ಹೊಂದಿರುವ, ದಾಜಿಬಾನ ಪೇಟೆಯ ಶ್ರೀ ಗಜಾನನ ಉತ್ಸವ ಸಮಿತಿಗೆ ನೂತನ ಅಧ್ಯಕ್ಷರಾಗಿ ಯುವ ಮುಖಂಡರಾದ ಶ್ರೀ ಮಂಜುನಾಥ ಪಾಂಡುರಂಗಸಾ ರತನ ಇವರು ಸರ್ವಾನುಮತದಿಂದ ಆಯ್ಕೆಯಾದರು.
ದಿ.11.07.2024 ರ ಗುರುವಾರ ದಿವಸದಂದು, ದಾಜಿಬಾನ ಪೇಟೆಯ ಶ್ರೀ ಗಣಪತಿ ದೇವಸ್ಥಾನದಲ್ಲಿ ನಡೆದ ಸರ್ವಸಾಧಾರಣ ಸಭೆಯಲ್ಲಿ ಈ ಆಯ್ಕೆಯು ಜರುಗಿತು.ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀ ಪಾಂಡುರಂಗಸಾ ಮೆಹರವಾಡೆ ಇವರನ್ನು ಸಮಿತಿಗೆ ಗೌರವ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ಶ್ರೀ ಮೋಹನ ಏಕಬೋಟೆ ,ಶ್ರೀ ಗಿರೀಶ ಮೆಹರವಾಡೆ, ಗೌರವ ಕಾರ್ಯದರ್ಶಿಗಳಾಗಿ ಶ್ರೀ ಜಯದೇವ ಪವಾರ, ಕೋಶಾಧಿಕಾರಿಗಳಾಗಿ ಶ್ರೀ ಸಂಜಯ ಮೇಹರವಾಡೆ, ಸಹ ಕೋಶಾಧಿಕಾರಿಗಳಾಗಿ ಶ್ರೀ ರಾಜು ಪವಾರ ,ಸದಸ್ಯರುಗಳಾಗಿ ಶ್ರೀ ಶ್ರೀನಿವಾಸ ರತನ, ಶ್ರೀವಿಜಯ ಪವಾರ, ಶ್ರೀ ಮನೋಜ ರತನ, ಶ್ರೀ ಮಂಜುನಾಥ ರತನ, ಶ್ರೀ ಪವನ ಪವಾರ, ಶ್ರೀ ಕಿಶೋರ ರತನ, ಶ್ರೀ ವೆಂಕಟೇಶ ಕಲಬುರ್ಗಿ ,ಶ್ರೀ ಸುನಿಲ ಮಿಸ್ಕಿನ, ಶ್ರೀ ಗುರುರಾಜ ಕಲಬುರ್ಗಿ, ಶ್ರೀ ಅಮಿತ್ ರತನ , ಶ್ರೀ ಅಮಿತ ಕಲ್ಬುರ್ಗಿ ನೇಮಕಗೊಂಡಿರುವರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್. ಎಸ್, ಕೆ. ಸಮಾಜದ ಉಪ ಮುಖ್ಯ ಧರ್ಮದರ್ಶಿಗಳಾದ ಶ್ರೀ ಭಾಸ್ಕರ ಎನ್ ಜಿತೂರಿ ಯವರು ಸಮಿತಿ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ನಾವೆಲ್ಲರೂ ಈ ಮೂಲಕ ಅಭಿನಂದಿಸುತ್ತೇವೆ.
ಸದರ ಸಭೆಯ ಅಧ್ಯಕ್ಷತೆಯನ್ನು ಶ್ರೀ ಗಣಪತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ನಾಗೇಂದ್ರಸಾ ಎಂ ಮೆಹರವಾಡೆ ಅವರು ವಹಿಸಿದ್ದರು. ದಾಜಿಬಾನ ಪೇಟೆ ಹಿರಿಯರಾದ ಶ್ರೀ ಆರ್.ಡಿ.ರತನ ಇವರು ಉಪಸ್ಥಿತರಿದ್ದರು.
ಸದರ ಸರ್ವ ಸಾಧಾರಣ ಸಭೆಯಲ್ಲಿ ದಾಜಿಬಾನ ಪೇಟೆಯ ವ್ಯಾಪಾರಸ್ಥರು, ಯುವಕರು, ಪ್ರಮುಖರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.