ಮುಂಡಗೋಡ : ಕಣಜೀರಿಗೆ ಹುಳು ಕಡಿತಕ್ಕೆ ಒಳಗಾಗಿ ಮೃತಪಟ್ಟ ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ದನಗರ ಗೌಳಿ ಸಮುದಾಯದ ಯುವಕ ಜನ್ನು ದೂಳು ಕೊಕರೆ ಕುಟುಂಬಕ್ಕೆ ಶಾಸಕರಾದ ಶಿವರಾಮ ಹೆಬ್ಬಾರ್ ಅವರ ಅತೀವ ಪ್ರಯತ್ನದ ಫಲವಾಗಿ 15 ಲಕ್ಷ ರೂಪಾಯಿ ಪರಿಹಾರ ಮಂಜೂರಾಗಿದ್ದು.
ಮಾನ್ಯ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮೃತ ಯುವಕ ಜನ್ನು ದೂಳು ಕೊಕರೆ ಅವರ ಕುಟುಂಬಸ್ಥರಿಗೆ 15 ಲಕ್ಷ ರೂಪಾಯಿಯ ಪರಿಹಾರ ಧನದ ಚಕ್ ಅನ್ನು ಹಸ್ತಾಂತರಿಸಿದರು.