ಆರೆಳು ತಿಂಗಳಿಂದ ತ್ಯಾಜ್ಯ ವಿಲೇವಾರೊ ವಾಹನದ ಕೆಲಸ ಶೂನ್ಯ
ನೀಡಿದ ತ್ಯಾಜ್ಯ ವಿಲೇವಾರಿ ವಾಹನ ಉದ್ದೇಶವೇ ಮರೆತ್ರಾ ಸುಳ್ಳ ಪಂಚಾಯತಿ ಪಿಡಿಓ
ಬಿಲ್ ತೆಗೆಯಲು ಮಾತ್ರ ಉಪಯೋಗ ಆಗುತ್ತಿದ್ದೇಯಾ ತ್ಯಾಜ್ಯ ವಿಲೇವಾರಿ ವಾಹನ
ಸ್ವಚ್ಚ ಭಾರತ ಯೋಜನೆಯಡಿ ಗ್ರಾಮ ಪಂಚಾಯತಿಗಳಿಗೆ ತ್ಯಾಜ್ಯ ವಿಲೇವಾರಿ ವಾಹನ ಹಸ್ತಾಂತರ
ಸುಳ್ಳ ಗ್ರಾಮದಲ್ಲಿ ಯೋಜನೆ ಉದ್ದೇಶ ಮರೆತು ಬಿಟ್ಟ ಪಂಚಾಯತಿ
ಪಂಚಾಯತಿ ಜನಪ್ರತಿನಿಧಿಗಳೇ ಏನಿದೂ ತ್ಯಾಜ್ಯ ವಿಲೇವಾರಿ ವಾಹನ ಕಥೆ
ಕನಿಷ್ಠ ಪಕ್ಷ ವಾಹನವಾದರು ಗ್ರಾಮಸ್ಥರಿಗೆ ತೋರಿಸಿ
ಹುಬ್ಬಳ್ಳಿ:ನಗರಗಳಂತೆ ಗ್ರಾಮೀಣ ಭಾಗದಲ್ಲೂ ಸ್ವಚ್ಚವಾದ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ವಾಹನ ನೀಡಲಾಗಿದೆ. ಲಕ್ಷಗಟಲೇ ಹಣ ನೀಡಿ ವಾಹನ ನೀಡಿದರು ಕೂಡಾ ಇಲ್ಲೊಂದು ಪಂಚಾಯತಿಯಲ್ಲಿ ವಾಹನ ಬ0ದಿರೋದು ಮಾತ್ರ ಗೊತ್ತು ಆದರೆ ಕೆಲಸ ನಿರ್ವಹಿಸಿದ್ದು ಶೂನ್ಯ. ಎಸ್ ಹೌದು ಇದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮ ಪಂಚಾಯತಿಯ ತ್ಯಾಜ್ಯ ವಿಲೇವಾರಿ ವಾಹನ ಕಥೆ.
ಈ ಗ್ರಾಮ ಪಂಚಾಯತಿಗೆ ಗ್ರಾಮದಲ್ಲಿನ ಸ್ವಚ್ಚತೆಗಾಗಿ ತ್ಯಾಜ್ಯ ವಿಲೇವಾರಿ ವಾಹನ ನೀಡಲಾಗಿದೆ. ಅದಕ್ಕೆ ವಾಹನ ಚಾಲಕ ಜತೆಗೆ ಸಹಾಯಕರನ್ನು ನೀಡಲಾಗಿದೆ. ಆದರೆ ವಾಹನ ಬಂದಿರೋದು ಅಷ್ಟೇ ಬಿಟ್ಟರೆ ಅದರ ಕೆಲಸ ಮಾತ್ರ ಕಾಣಿಸುತ್ತಿಲ್ಲ ಅನ್ನುವುದು ಗಂಭೀರ ಆರೋಪ. ಇನ್ನೂ ಕಳೆದ ಆರೇಳು ತಿಂಗಳಿಂದ ಸುಳ್ಳ ಗ್ರಾಮ ಪಂಚಾಯತಿ ತ್ಯಾಜ್ಯ ವಿಲೇವಾರಿ ವಾಹನ ಕಾಣೆಯಾಗಿದೆ. ಲಕ್ಷಗಟ್ಟಲೆ ಸಾರ್ವಜನಿಕರ ಹಣ ತೆರಿಗೆ ಹಣ ಖರ್ಚು ಮಾಡಿ ವಾಹನ ನೀಡಿದರು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಇದು ಕೈಗನ್ನಡಿಯಾಗಿದೆ. ಪಂಚಾಯತಿಯಲ್ಲಿ ಈ ವಾಹನ ಹೆಸರಿನಲ್ಲಿ ಎಷ್ಟು ಬಿಲ್ ತೆಗೆದಿದ್ದಾರೆ ಅನ್ನುವುದು ಕೂಡಾ ಬಹುದೊಡ್ಡ ಪ್ರಶ್ನೆ ಈಗ ಪ್ರಕರಣದ ಪ್ರಜ್ಞಾಂತರಲ್ಲಿ ಕಾಡುತ್ತಿದೆ.