ಕಲಘಟಗಿ: ಧಾರವಾಡ ಜಿಲ್ಲೆಯ ಕಲಘಟಗಿ ಸೇರಿದಂತೆ ವಿವಿದೆಢೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಕಲಘಟಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ಬೋಗೋರ ಗ್ರಾಮದ ನಿವಾಸಿಯಾಗಿರುವ ಧರ್ಮರಾಜ ಹರಿಜನ (23) ಎಂಬಾತನನ್ನ ಬಂಧನ ಮಾಡಲಾಗಿದ್ದು, ಬಂಧಿತನಿಂದ 4 ದ್ವಿಚಕ್ರವಾಹನಗಳ ವಶಕ್ಕೆ ಪಡೆಯಲಾಗಿದೆ.
ಆರೋಪಿತ ಬೈಕುಗಳನ್ನ ಕಳ್ಳತನ ಮಾಡಿರುವುದನ್ನ ಒಪ್ಪಿಕೊಂಡಿದ್ದು, 4 ಬೈಕುಗಳ ಮೌಲ್ಯ 2.80 ಲಕ್ಷ ರೂಪಾಯಿಗಳಾಗಿದ್ದು, ಹೆಚ್ಚಿನ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.
ಬೈಕ್ ಕಳ್ಳತನದ ಬಗ್ಗೆ ಕಲಘಟಗಿಯ ಸತ್ಯಮೂರ್ತಿ ಜೋಶಿ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ ಎಎಸ್ಐ ಸಿ.ಎನ್.ಕರವೀರಮಠ, ಬಸವರಾಜ ಯದ್ದಲಗುಡ್ಡ, ಸಿಬ್ಬಂದಿಗಳಾದ ಮಾಂತೇಶ, ಶ್ರೀಧರ ಗುಗ್ಗರಿ, ಗೋಪಾಲ ಪಿರಗಿ, ಮಲ್ಲಿಕಾರ್ಜುನ, ಪ್ರಭುದೇವ ಎಸ್, ವಿನಾಯಕ ಸಿ.ಪಿ, ಹುಸೇನ ಯಲಿಗಾರ, ಮಾದೇವ ಹೊಸಮನಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.