Sunday, December 22, 2024
spot_img
Homeಸಿನಿಮಾಹುಬ್ಬಳ್ಳಿಯ ಬಸವೇಶ್ವರ ಖಾನಾವಳಿಯಲ್ಲಿ ಊಟ ಸವಿದ ನಿರ್ದೇಶಕ ಯೋಗರಾಜ್ ಭಟ್

ಹುಬ್ಬಳ್ಳಿಯ ಬಸವೇಶ್ವರ ಖಾನಾವಳಿಯಲ್ಲಿ ಊಟ ಸವಿದ ನಿರ್ದೇಶಕ ಯೋಗರಾಜ್ ಭಟ್

ಹುಬ್ಬಳ್ಳಿ: ಹಸಿದವರ ಹೊಟ್ಟೆಯನ್ನು ತುಂಬಿಸುವ, ಗ್ರಾಹಕರ ನೆಚ್ಚಿನ ಊಟದ ಮನೆಯಾಗಿರುವ ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯ ಪತ್ರಕರ್ತರ ಭವನದ ಪಕ್ಕದಲ್ಲಿನ ಶ್ರೀ ಬಸವೇಶ್ವರ ಖಾನಾವಳಿಯಲ್ಲಿ ಹೋಳಿಗೆ ಮನೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರು ಉತ್ತರ ಕರ್ನಾಟಕ ಶೈಲಿಯ ಭೋಜನ ಹಾಗೂ ಹೋಳಿಗೆಯನ್ನು ಸವಿದರು.

ಬಾರಿ ಕುತೂಹಲ ಮೂಡಿಸಿರುವ ಶಿವಣ್ಣ, ಪ್ರಭುದೇವ ಅಭಿನಯದ ಕರಟಕ ದಮನಕ ಚಿತ್ರದ ಪ್ರಚಾರ ಕಾರ್ಯದ ನಿಮಿತ್ತ ಹುಬ್ಬಳ್ಳಿಗೆ ಆಗಮಿಸಿದ ಅವರು, ಶ್ರೀ ಬಸವೇಶ್ವರ ಖಾನಾವಳಿ ಹೋಳಿಗೆ ಮನೆಯಲ್ಲಿ ಹೋಳಿಯ ರುಚಿ ಸವಿದು ಖುಷಿಪಟ್ಟರು.

ಇವರ ಜತೆಗೆ ಹಾಸ್ಯ ಕಲಾವಿದರು ಹಾಗೂ ಹಿರಿಯ ನಟ ದೊಡ್ಡಣ್ಣ, ನಟಿ ನಿಶ್ವಿಕಾ ಕೂಡಾ ಖಾನಾವಳಿ ಊಟ ಸವಿದರು

ಬಳಿಕ ಯೋಗರಾಜ್ ಭಟ್ ಅವರು ಬಸವೇಶ್ವರ ಖಾನಾವಳಿ ಕೈ ರುಚಿ ವಂಡರ್ ಫುಲ್, ಜೈ ಶ್ರೀ ಬಸವೇಶ್ವರ ಖಾನಾವಳಿ ಹುಬ್ಬಳ್ಳಿ ಎಂದು ಹಸ್ತಾಕ್ಷರ ನೀಡಿದರು.

ಇದರ ಜತೆಗೆ ನಮ್ಮ ಮನಸಿನಂತೆ ಸಿಹಿಯಾಗಿರುವ ಒಬ್ಬಟ್ಟು ಕೊಟ್ಟಿದೀರಿ thank you ಎಂದು ನಟಿ ನಿಶ್ವಿಕಾ ನಾಯ್ಡು ಹೇಳಿದ್ದರು ದೊಡ್ಡಣ್ಣ ಅವರು, ಬಸವೇಶ್ವರ ಖಾನಾವಳಿಯಲ್ಲಿ ಊಟ ಮಾಡಿದೆ. ಎಷ್ಟು ತೃಪ್ತಿಯಾಯಿತು ಎಂದರೆ ನನ್ನ ತಾಯಿ ನಂಜಮ್ಮನ ಶೈಲಿ ಊಟ ಮಾಡಿದಷ್ಟು ತೃಪ್ತಿಯಾಯಿತು. ಅನ್ನಥಾತೋ ಸುಖಿಃ ಭವೋ ಎಂದು ಹಸ್ತಾಕ್ಷರ ನೀಡಿದ್ದಾರೆ.

ಬಳಿಕ ಖಾನಾವಳಿ ಮಾಲೀಕ ಅಪ್ಪಣ್ಣ ಮಾತನಾಡಿ, ನಮ್ಮ ಖಾನಾವಳಿಯಲ್ಲಿ ಯೋಗರಾಜ್ ಭಟ್ಟರು, ದೊಡ್ಡಣ್ಣ, ನಿಶ್ವಿಕಾ ಹೋಳಿಗೆ ರುಚಿಯನ್ನು ಸವಿದಿದ್ದು, ಇದು ಖುಷಿ ತಂದಿದೆ. ಇದೇ ತರಹ ಸುಚಿ, ರುಚಿ ಕಾಯ್ದುಕೊಂಡು ಹೋಗಲು ತಿಳಿಸಿ, ಶುಭ ಹಾರೈಸಿದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದ ಮುತ್ತಣ್ಣವರ ಮುತ್ತು ಶಾಂತಪುರಮಠ ಎಫ್ ಎಲ್ ಬುಡ್ಡಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments