ಕಳಸಾ ಬಂಡೂರಿ ರೈತ ಹೋರಾಟಗಾರರ ಆಕ್ರೋಶ ಮತ್ತೆ ಭುಗಿಲೆದ್ದಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾರಿಗೆ ಮುತ್ತಿಗೆ ಹಾಕಿದ ಘಟನೆ ಹುಬ್ಬಳ್ಳಿಯ ಜೋಶಿಯವರ ನಿವಾಸದ ಎದುರು ನಡೆದಿದೆ.ಕಳಸಾ ಬಂಡೂರಿ ಕಾಮಗಾರಿ ಆರಂಭ ವಿಳಂಬ ಹಿನ್ನೆಲೆ ಮನವಿ ಸಲ್ಲಿಸಲು, ನವಲಗುಂದ,ನರಗುಂದ ಮಹದಾಯಿ ಹೋರಾಟಗಾರರು ಜೋಶಿ ಅವರ ಮನೆಗೆ ಬಂದಿದ್ದರು.ಈ ವೇಳೆ ಚುನಾವಣೆಗೂ ಮುನ್ನವೇ ಕಳಸಾ ಬಂಡೂರಿ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿದ ರೈತ ಹೋರಾಟಗಾರರು, ಕಾಮಗಾರಿ ಆರಂಭವಾಗದೆ ಇದ್ದಲ್ಲಿ ಮತ ಕೇಳಲು ಬನ್ನಿ ಪಾಠ ಕಲಿಸ್ತೇವೆ ಎಂದು ಗುಡುಗಿದರು.ರೈತರ ಎಚ್ಚರಿಕೆಗೆ ತಬ್ಬಿಬ್ಬಾದ ಕೇಂದ್ರ ಸಚಿವ ಜೋಶಿ, ಹೋರಾಟಗಾರರನ್ನು ಸಮಾಧಾನ ಮಾಡುತ್ತಲೇ, ಆದಷ್ಟು ಬೇಗ
ಮಾಡ್ತೇವೆ ಮಾಡ್ತೇವೆ ಎನ್ನುತ್ತಲೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ.