Monday, December 16, 2024
spot_img
Homeವಿಶೇಷ ಸುದ್ದಿಗಳುದೇವಾಲಯಗಳ ಹುಂಡಿ ಹಣದ ಬಗ್ಗೆ ಸ್ಪಷ್ಟನೆ ನೀಡಿದ ಅರ್ಚಕರ ಸಂಘ, ಬಿಜೆಪಿ ಆರೋಪಕ್ಕೆ ತಿರುಗೇಟು

ದೇವಾಲಯಗಳ ಹುಂಡಿ ಹಣದ ಬಗ್ಗೆ ಸ್ಪಷ್ಟನೆ ನೀಡಿದ ಅರ್ಚಕರ ಸಂಘ, ಬಿಜೆಪಿ ಆರೋಪಕ್ಕೆ ತಿರುಗೇಟು

ಬೆಂಗಳೂರು, (ಫೆಬ್ರವರಿ 25): ಕರ್ನಾಟಕ ದೇವಾಲಯಗಳ (Karnataka Temples) ಹಣವನ್ನು ಸಿದ್ದರಾಮಯ್ಯ(Siddaramiah) ಸರ್ಕಾರ ಚರ್ಚ್​, ಮಸೀದಿಗೆ ನೀಡುತ್ತಿದೆ ಎನ್ನುವ ಆರೋಪವನ್ನು ಬಿಜೆಪಿ(BJP) ಮಾಡುತ್ತಿದೆ. ಇನ್ನು ಈ ಬಗ್ಗೆ ಖುದ್ದು ಸ್ಪಷ್ಟನೆ ನೀಡಲು ರಾಜ್ಯ ದೇವಾಲಯಗಳ ಅರ್ಚಕರ ಸಂಘ (Karnataka priest association) ಮುಂದೆ ಬಂದಿದೆ. ಬೆಂಗಳೂರಿನಲ್ಲಿಂದು (ಫೆಬ್ರವರಿ 25) ಸುದ್ದಿಗೋಷ್ಠಿ ನಡೆಸಿದ ರಾಜ್ಯ ದೇವಾಲಯಗಳ ಅರ್ಚಕರ ಸಂಘ , ಎ, ಬಿ, ಸಿ ದರ್ಜೆ ದೇವಾಲಯಗಳ ಹುಂಡಿ ಹಣ ದುರುಪಯೋಗ ಆಗುತ್ತಿಲ್ಲ. ಯಾವುದೇ ದೇವಾಲಯಗಳ ಹುಂಡಿ ಹಣ ದುರುಪಯೋಗ ಆಗುವುದಿಲ್ಲ. ದೇವಾಲಯಗಳ ಹುಂಡಿ ಹಣ ಒಳ್ಳೆಯ ಕೆಲಸಕ್ಕೆ ಉಪಯೋಗ ಆಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಮಾತನಾಡಿ, ರಾಜ್ಯದ ಎ ದರ್ಜೆಯ ದೇವಸ್ಥಾನಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಎ ದರ್ಜೆ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ದೇವಾಲಯಗಳ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಅದನ್ನು ಸಹಿಸಲಾಗದ ರೀತಿ ಬಿಜೆಪಿ ನಾಯಕರು ಚರ್ಚ್, ಮಸೀದಿಗಳಿಗೆ ಹಣ ಹೋಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಿತ್ಯ ಕೋಟ್ಯಂತರ ಹಣ ಸಂಗ್ರಹ ಆಗುತ್ತಿದ್ದು, ಇದನ್ನು ಬಿಜೆಪಿ ಸಹಿಸುತ್ತಿಲ್ಲ. ಬಿಜೆಪಿಯವರೇ ದಯವಿಟ್ಟು ಅಪಪ್ರಚಾರ ಮಾಡುವುದನ್ನು ಬಿಡಿ ಎಂದು ಮನವಿ ಮಾಡಿದರು.

ಬಿಜೆಪಿ ಆರೋಪವೇನು?
ಮುಜರಾಯಿ ಇಲಾಖೆಯಲ್ಲಿ 35 ಸಾವಿರ ದೇವಸ್ಥಾನಗಳಿವೆ. ಈ ದೇಗುಲಗಳಲ್ಲಿ ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತೆ. ಈ ಕಾಣಿಕೆಯನ್ನ ದೇವಾಲಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ವಿಧೇಯಕದಲ್ಲಿ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದೇ ಬಿಲ್ ಈಗ ಬಿಜೆಪಿಗೆ ಅಸ್ತ್ರವಾಗಿ ಮಾಡಿಕೊಂಡಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಈ ಹಿಂದಿನ ನಿಯಮದಂತೆ 5 ಲಕ್ಷ ರೂಪಾಯಿವರೆಗೆ ಆದಾಯ ಸಂಗ್ರಹವಾದ್ರೆ, ಸರ್ಕಾರಕ್ಕೆ ಆದಾಯ ನೀಡಬೇಕು ಅಂತಿರಲಿಲ್ಲ. ಆದ್ರೆ, 5 ಲಕ್ಷದಿಂದ 25 ಲಕ್ಷದವರೆಗಿನ ವಾರ್ಷಿಕ ಆದಾಯದಲ್ಲಿ ಶೇಕಡಾ 5ರಷ್ಟನ್ನ ಸರ್ಕಾರಕ್ಕೆ ನೀಡಬೇಕಿತ್ತು. 25 ಲಕ್ಷ ಮೇಲ್ಪಟ್ಟು ಆದಾಯಕ್ಕೆ 10 ಪರ್ಸೆಂಟ್ ನಿಗದಿಮಾಡಲಾಗಿತ್ತು. ಆದ್ರೆ, ಈ ಹಳೆ ನಿಯಮ ಬದಲಾಯಿಸಿ ದೇಗುಲಗಳ ಆದಾಯಕ್ಕೆ ಕನ್ನ ಹಾಕುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯ ಪೋಸ್ಟ್
ಬಿಜೆಪಿ ನಾಯರು ಮಾತ್ರವಲ್ಲದೇ ಪಕ್ಷದ ಐಟಿ ಸೆಲ್​ ಸಹ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಸಿದ್ದರಾಮಯ್ಯನವರ ಫೋಟೋವನ್ನು ವಿವಿಧ ರೀತಿಯಲ್ಲಿ ತಿರುಚಿ ಪೋಸ್ಟ್​ ಶೇರ್ ಮಾಡುತ್ತಿದೆ. ಜಾಗೃತರಾಗಿ ಹಿಂದೂಗಳೇ, ದೇವರ ಹುಂಡಿಗೆ ಕನ್ನ ಹಾಕುತ್ತಿದ್ದಾರೆ ಕನ್ನರಾಮಯ್ಯನವರು. ಹಿಂದೂಗಳು ದೇವಸ್ಥಾನದ ಹುಂಡಿಗೆ ಹಾಕುವ ದಾನವನ್ನು ಸಿದ್ದರಾಮಯ್ಯರ ಹುಂಡಿಗೆ ವರ್ಗಾಯಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಕನ್ನಡಿಗರ ಶ್ರಮದ ತೆರಿಗೆ ಹಣ ವೈನಾಡಿನ ಕಡೆಗೆ, ದೇವಸ್ಥಾನದ ಹುಂಡಿಯ ಹಣ, ತಗಡು ಸರ್ಕಾರದ ಓಲೈಕೆ ರಾಜಕಾರಣದ ಕಡೆಗೆ. ಹೀಗೆ ಪಂಚಿಂಗ್​ ಲೈನ್​ ಮೂಲಕ ಸಿದ್ದರಾಮಯ್ಯ ಫೋಟೋ ಹಾಕಿ ವ್ಯಂಗ್ಯ ಭರಿತ ಪೋಸ್ಟರ್​ ಮೂಲಕ ಸಾರ್ವಜನಿಕರಿಗೆ ಕರೆ ನೀಡುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments