ರಾಮನಗರದಲ್ಲಿ ಹಮ್ಮಿಕೊಂಡಿರುವ ಮಹಿಳೆಯರ ಗೃಹಲಕ್ಷ್ಮಿ ಸಮಾವೇಶದಲ್ಲಿ ಮಾತನಾಡಿದ ಸಂಸದ ಡಿಕೆ ಸುರೇಶ್, ‘ತಾಯಂದಿರ ಹೆಸರಿನಲ್ಲಿ ಈ ಸರ್ಕಾರ ಬಂದಿದೆ. ಈ ಹಿನ್ನಲೆಯಲ್ಲೇ ಯೋಜನೆಗಳಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಎಂದು ಹೆಸರಿಟ್ಟಿದ್ದೇವೆ. ನಾವು ಈ ಹಿಂದೆ ಯಾವ 40% ಹಣದ ಬಗ್ಗೆ ಆರೋಪ ಮಾಡಿದ್ದೇವೂ, ಅದೇ ಹಣದಿಂದಲೇ ಐದು ಗ್ಯಾರೆಂಟಿ ಅನುಷ್ಠಾನ ಮಾಡಿದ್ದೇವೆ ಎಂದರು.
ರಾಮನಗರ, ಫೆ.25: ಯಾರು ಏನೇ ಹೇಳಿದರೂ, ನಿಮ್ಮ ಗ್ಯಾರೆಂಟಿ ಅಲ್ಲಾಡಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ಡಿಕೆ ಸುರೇಶ್ (D.K Suresh) ಹೇಳಿದರು. ರಾಮನಗರದಲ್ಲಿ ಹಮ್ಮಿಕೊಂಡಿರುವ ಮಹಿಳೆಯರ ಗೃಹಲಕ್ಷ್ಮಿ ಸಮಾವೇಶದಲ್ಲಿ ಮಾತನಾಡಿದ ಅವರು, ತಾಯಂದಿರ ಹೆಸರಿನಲ್ಲಿ ಈ ಸರ್ಕಾರ ಬಂದಿದೆ. ಈ ಹಿನ್ನಲೆಯಲ್ಲೇ ಯೋಜನೆಗಳಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಎಂದು ಹೆಸರಿಟ್ಟಿದ್ದೇವೆ. ಈಗಾಗಲೇ ಕಾಂಗ್ರೆಸ್ಗೆ ಶಕ್ತಿ ತುಂಬಿದ್ದೀರಿ. ಆದರೆ, ಇದರ ಮುಂದೆ ಬಹಳ ದೊಡ್ಡ ಸವಾಲಿದೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಮುಖಂಡರು, ನಾವು ಐದು ಗ್ಯಾರೆಂಟಿ ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೇವು. ಕೆಲವರು ಟೀಕೆ ಮಾಡಿದ್ರು, ಕೆಲವರು ಪ್ರಶ್ನೆ ಮಾಡಿದ್ದರು, ಆದರೆ ತಮ್ಮ ಆಶಿರ್ವಾದದಿಂದ ಐದು ಗ್ಯಾರೆಂಟಿ ಜಾರಿ ಮಾಡಿದ್ದೇವೆ. ಆದರೂ ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದಾರೆ. ನಾವು ಈ ಹಿಂದೆ ಯಾವ 40% ಹಣದ ಬಗ್ಗೆ ಆರೋಪ ಮಾಡಿದ್ದೇವೂ, ಅದೇ ಹಣದಿಂದಲೇ ಐದು ಗ್ಯಾರೆಂಟಿ ಅನುಷ್ಠಾನ ಮಾಡಿದ್ದೇವೆ. 40 ಕಮಿಷನ್ನನ್ನು ಈ ರಾಜ್ಯದ ರೈತರಿಗೆ, ಮಹಿಳೆಯರಿಗೆ ಕೊಡೊದಕ್ಕೆ ಸಾಧ್ಯ ಆಗುತ್ತಿದೆ. ಯಾವ ಭ್ರಷ್ಟಾಚಾರ ಮಾಡ್ತಾ ಇದ್ರಿ, ಅದನ್ನು ತಪ್ಪಿಸಿ ರಾಜ್ಯದ ಮಹಿಳೆಯರಿಗೆ ಐದು ಗ್ಯಾರೆಂಟಿ ಕೊಟ್ಟಿದ್ದೇವೆ. ಒಬ್ಬರೆ, ಒಬ್ಬರಾದರೂ ಅರ್ಜಿ ಹಾಕಲಿಕ್ಕೆ ಹಣ ಕೊಡಿ ಎಂದು ಕೇಳಿದ್ದೀವಾ ಎಂದರು.