ಹುಬ್ಬಳ್ಳಿ:- ಸುಪ್ರಸಿದ್ಧ ಸದ್ಗುರು ಶಿದ್ಧಾರೂಢ ಮಠದಲ್ಲಿ ನಡೆದ ಲೆಕ್ಕ ವರದಿ ಸಭೆಯಲ್ಲಿ ಧರ್ಮದರ್ಶಿಗಳ ವಿರುದ್ಧ ಮೇಲ್ಮನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಮೂರು ವರ್ಷದ ಆಡಿಟ್ ರಿಪೋಟ್೯ ಕೊಡುವಂತೆ ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಸಂಪೂರ್ಣ ಖರ್ಚು,ವೆಚ್ಚದ ಮಾಹಿತಿ ನೀಡತಿಲ್ಲಾ ಧರ್ಮದರ್ಶಿಗಳು ಅಂತಾ ಕೆಲ ಸದಸ್ಯರು ಗದ್ದಲ ಮಾಡಿ ಸಭೆಯನ್ನು ನಡೆಸದಂತೆ ಒತ್ತಡ ಹೇರಿದರು.ಅದಕ್ಕೆ ಕಾರಣವೂ ಇದೆ ಅಂತೆ.
ಕಳೆದ ಮೂರು ವರ್ಷದಲ್ಲಿ ಮಠಕ್ಕೆ ಮಾಡಿದ ಖರ್ಚು,ಬಂದ ಆದಾಯ ಕುರಿತು ಸರಿಯಾದ ಮಾಹಿತಿ ನೀಡಿ ಹಾಗೂ ಆಡಿಟ್ ರಿಪೋಟ್೯ಗೆ ಪಟ್ಟು ಹಿಡಿದಿದ್ದೇ ಗದ್ದಲಕ್ಕೆ ಕಾರಣವಾಗಿದೆ.
ಕೆಲ ಸದಸ್ಯರು ಮಠದಲ್ಲಿ ಈ ಧರ್ಮದಶಿಗಳಿಂದ ಸಾಕಷ್ಟು ಅವ್ಯವಹಾರ ಆಗಿದೆ.ಸಂಪ್ರದಾಯ ಈ ಮಠದಲ್ಲಿ ಈ ಕಮೀಟಿ ಭಕ್ತರ ಅನುಕೂಲಕ್ಕಾಗಿ ಇರಬೇಕು. ಆದರೆ ಇವರಿಂದ ಮಠಕ್ಕೆ ಅನಾನುಕೂಲವಾಗಿದೆ.ಮಠದ ಸಂಪ್ರದಾಯ ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದ್ದಾರೆ.