ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಮೂರು ಕಡೆ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ಮಾಡಿ 27 ಜನರನ್ನು ಬಂಧಿಸಿ ಬಂಧಿತರಿಂದ ನಲವತ್ತು ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಜೊತೆಗೆ ಕುರಡಿಕೆರಿ,ತಿರುಮಲಕೊಪ್ಪ ಮತ್ತು ತಡಸ್ ಕ್ರಾಸ ನಲ್ಲಿ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದವರ 3 ಜನರನ್ನ ಬಂಧನ ಮಾಡಿ ಸಾರಾಯಿ ವಶಪಡಿಸಿಕೊಂಡಿದ್ದಾರೆ
ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ದಂಧೆಕೋರರಿಗೆ ನಡುಕ ಹುಟ್ಟಿಸಿದ ಸಿಪಿಆಯ್ ಮುರಗೇಶ ಚನ್ನಣ್ಣವರ ಹೆಬಸೂರ.ಕಿರೇಸೂರ.ಮಾವನೂರ ಗ್ರಾಮಗಳ ಹೊರವಲಯದಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ದಾಳಿ ಮಾಡಿ ಆರೆಸ್ಟ್ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಆಯ್ ಸಚಿನ್ ಅಲಮೇಲಕರ,ಹಾಗೂ ಅಭಿಜೀತ್.ಸಿಬ್ಬಂದಿಗಳಾದ ಹೊನ್ನಪ್ಪನವರ,ಕಾಕರ,ಚನ್ನಪ್,ಮಹಾಂತೇಶ,ಗಿರೀಶ,ಸುಣಗಾರ,ಯಮನೂರ ಹಾಗೂ ಸಂಶಿ ಭಾಗವಹಿಸಿದ್ದರು.