ಕೋಲಾರ: ಮದುವೆ ಎಂದರೆ ನೂರು ವರ್ಷದ ಸುಗ್ಗಿ ಎನ್ನುತ್ತಾರೆ. ಆದರೆ ಇಂದಿನ ಸಮಾಜದಲ್ಲಿ ದಾಂಪತ್ಯ ಜೀವನ ಮೂರೇ ವರ್ಷಕ್ಕೆ ಕಾಲಿಟ್ಟು ಕೆಲವು ಜೋಡಿಗಳು ಮದುವೆಯಾದ ಕೂಡಲೇ ಬೇರ್ಪಡುತ್ತಾರೆ. ಆದರೆ ಇಲ್ಲೊಂದು ನವ ವಿವಾಹಿತ ಜೋಡಿ ಮದುವೆಯಾದ ದಿನವೇ ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿರುವ ಈ ಘಟನೆ ಸಂಚಲನ ಮೂಡಿಸಿದೆ. ನವೀನ್ ಮತ್ತು ಲಿಖಿತಾಶ್ರೀ ಪರಸ್ಪರ ಪ್ರೀತಿಸುತ್ತಿದ್ದು. ಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಮದುವೆ ಮಾಡಿಕೊಂಡಿದ್ದರು. ಮದುವೆ ಬಳಿಕ ರೂಮಿನೊಳಗೆ ಹೋದ ಇಬ್ಬರ ನಡುವೆ ಏನಾಯಿತೋ ಗೊತ್ತಿಲ್ಲ. ಯಾಕೆ ಕೋಪ ಮಾಡಿಕೊಂಡರೋ ಗೊತ್ತಿಲ್ಲ. ಪರಸ್ಪರ ಚಾಕುವಿನಿಂದ ಇರಿದಿದ್ದಾರೆ. ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಪ್ರಾಣಬಿಟ್ಟಿದ್ದಾರೆ. ಈ ಘಟನೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಎರಡರಲ್ಲೂ ಚರ್ಚೆಗೆ ಗ್ರಾಸವಾಗಿದ್ದು ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ