Sunday, December 22, 2024
spot_img
Homeವಿಶೇಷ ಸುದ್ದಿಗಳುಮಾಲಿಕರನ್ನು ಹುಡುಕುತ್ತಾ 195 ಕಿ.ಮೀ. ದೂರ ನಡೆದ ಮನೆ ಸೇರಿದ ನಾಯಿ!

ಮಾಲಿಕರನ್ನು ಹುಡುಕುತ್ತಾ 195 ಕಿ.ಮೀ. ದೂರ ನಡೆದ ಮನೆ ಸೇರಿದ ನಾಯಿ!

ಚಿಕ್ಕೋಡಿ: ಸೊಲ್ಹಾಪುರದ ಪಂಢರಪುರಕ್ಕೆ ತೀರ್ಥಯಾತ್ರೆಗೆ ತೆರಳಿದ್ದ ಕುಟುಂಬದ ಜೊತೆಗೆ ಅವರ ಮೆಚ್ಚಿನ ನಾಯಿ ಕೂಡ ತೆರಳಿತ್ತು. ಆದ್ರೆ ತೀರ್ಥಯಾತ್ರೆ ಮುಗಿಸಿ ಬರುವ ವೇಳೆ, ನಾಯಿ ನಾಪತ್ತೆಯಾಗಿತ್ತು. ಎಷ್ಟು ಹುಡುಕಿದರೂ ಸಿಗದ ಕಾರಣ ಮನೆಯವರು ವಾಪಸ್ ಬಂದಿದ್ದರು. ಆದರೆ ಇದೀಗ ಅಚ್ಚರಿಯ ಘಟನೆಯೊಂದು ನಡೆದಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿಯ ಜ್ಞಾನದೇವ ಕುಂಬಾರ ಎಂಬವರಿಗೆ ಸೇರಿದ ‘ಮಹಾರಾಜ’ ಎಂಬ ನಾಯಿ ಮಹಾರಾಷ್ಟ್ರದ ಸೊಲ್ಹಾಪುರದ ಪಂಢರಪುರ ಕ್ಷೇತ್ರದಲ್ಲಿ ನಾಪತ್ತೆಯಾಗಿತ್ತು, ನಾಯಿಯನ್ನು ಹುಡುಕಿ ಸಿಗದಿದ್ದಾಗ ಕುಟುಂಬಸ್ಥರು ವಾಪಸ್ ಮನೆಗೆ ಬಂದಿದ್ದರು. ಕುಟುಂಬಸ್ಥರು ಮನೆಗೆ ಬಂದು ನಾಲ್ಕು ದಿನಗಳಾದಾಗ ನಾಯಿ ಮತ್ತೆ ಮನೆಯಲ್ಲೇ ಪ್ರತ್ಯಕ್ಷವಾಗಿ ಅಚ್ಚರಿ ಸೃಷ್ಟಿಸಿದೆ.

ಮಹಾರಾಜ ನಾಯಿ 195 ಕಿ.ಮೀ. ದೂರದವರೆಗೆ ತನ್ನ ಮಾಲಿಕರನ್ನು ಹುಡುಕಿಕೊಂಡು ಬಂದು ಕೊನೆಗೂ ಮನೆ ಸೇರಿದೆ. ಸದ್ಯ ಸ್ವಾಮಿ ನಿಷ್ಠೆಗೆ ಹೆಸರಾಗಿರುವ ಮಹಾರಾಜನನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ.

ಮಹಾರಾಜ ವಾಪಸ್ ಬಂದ ಖುಷಿಯಲ್ಲಿ ಅವನಿಗೆ ಹಾರ ಹಾಕಿ ಗುಲಾಲ್ ಹಚ್ಚಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ನಾಯಿಯ ನಿಯತ್ತಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments