ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತರಾಗಿ ಎನ್. ಶಶಿಕುಮಾರ್ ನೇಮಕವಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಅಧಿಕೃತ ನೋಟಿಫಿಕೇಶನ ಪ್ರಕಟವಾಗುವುದಷ್ಟೇ ಬಾಕಿ ಇದೆ.
2007 ಬ್ಯಾಚ್ನ ಐಪಿಎಸ್ ಅಧಿಕಾರಿ ಆಗಿರುವ ಎನ್. ಶಶಿಕುಮಾರ್ ತಮ್ಮ ದಕ್ಷ ಹಾಗೂ ಕಟ್ಟುನಿಟ್ಟಿನ ಆಡಳಿತಕ್ಕೆ ಖ್ಯಾತಿ ಹೊಂದಿದ್ದಾರೆ. ಜೊತೆಗೆ ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತರನ್ನು ಬದಲಾಯಿಸಿ ಖಡಕ್ ಅಧಿಕಾರಿಯನ್ನು ನೇಮಿಸಬೇಕೆಂಬ ಒತ್ತಾಸೆ ಅವಳಿ ನಗರದ ಜನರಿಂದ ಕೇಳಿಬಂದಿತ್ತು. ಶಶಿಕುಮಾರ್ ಪೊಲೀಸ್ ಆಯುಕ್ತರಾಗಿ ಅವಳಿ ನಗರಕ್ಕೆ ಬರಲಿರುವ ಬಗ್ಗೆ ಎರಡು ವಾರಗಳ ಹಿಂದೆ ವರದಿ ಮಾಡಿತ್ತು.
ಹುಬ್ಬಳ್ಳಿ – ಧಾರವಾಡ ಅವಳಿನಗರದಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆ ಹೆಚ್ಚಾದ ಹಿನ್ನೆಲೆ ಪದೋನ್ನತಿ ಹೊಂದಿದ ಐಪಿಎಸ್ ಅಧಿಕಾರಿಗಳ ಬದಲಾಗಿ ನೇರ ಐಪಿಎಸ್ ಅಧಿಕಾರಿಗಳನ್ನು ನೇಮಿಸಲು ಗೃಹ ಸಚಿವರು ನಿರ್ಧರಿಸಿದ್ದರು. ಆ ಪ್ರಕಾರವಾಗಿ ದಕ್ಷ ಐಪಿಎಸ್ ಅಧಿಕಾರಿಯನ್ನು ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.