Monday, December 16, 2024
spot_img
Homeಕ್ರೈಂಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್‌ ಮಾರಾಟ: ಅಧಿಕಾರಿಗಳೇ ಇತ್ತ ಕಡೆ ಸ್ವಲ್ಪ ನೋಡಿ

ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್‌ ಮಾರಾಟ: ಅಧಿಕಾರಿಗಳೇ ಇತ್ತ ಕಡೆ ಸ್ವಲ್ಪ ನೋಡಿ

ಹುಬ್ಬಳ್ಳಿ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆ ಎಗ್ಗಿಲ್ಲದೆ ನಡೆದಿದೆ. ಈ ಹಿಂದೆ ಸರ್ಕಾರ 2016ರ ಮಾ.11ರಿಂದ ಜಾರಿಗೆ ಬರುವಂತೆ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ, ಸಾಗಣೆ, ಸಂಗ್ರಹ ಮತ್ತು ಮಾರಾಟ ನಿಷೇಧಿಸಿ ಅಧಿಸೂಚನೆ ಹೊರಡಿಸಿತ್ತು. ಜೊತೆಗೆ ಪ್ಲಾಸ್ಟಿಕ್ ನಿಷೇದ ಮಾಡಿದ ಮೊದಲ ರಾಜ್ಯ ಅಂದ್ರು ತಪ್ಪಾಗಲಾರದು.ಆರಂಭದಲ್ಲಿ ಅಧಿಕಾರಿಗಳ ದಾಳಿ ಮತ್ತು ದಂಡ ಪ್ರಯೋಗದಿಂದಾಗಿ ಪ್ಲಾಸ್ಟಿಕ್‌ ಬಳಕೆ ಹಾವಳಿ ಕಡಿಮೆಯಾಗಿತ್ತು. ಆದರೆ, ಈಗ ಪ್ಲಾಸ್ಟಿಕ್‌ ಬಳಕೆ ವಿಪರೀತವಾಗಿದೆ ಅಂತಾನೆ ಹೇಳಬಹುದು ಜೊತೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸಚಿವಾಲಯದ ನಿಲುವನ್ನು ಕೂಡ ತಿಳಿಸಿತ್ತು,ಹಣಕಾಸು ಸಚಿವಾಲಯವು ಕಸ್ಟಮ್ಸ್ ಇಲಾಖೆಯ ಎಲ್ಲಾ ಮುಖ್ಯ ಕಮಿಷನರಗಳಿಗೆ ತಮ್ಮ ಅಧಿಕಾರಿಗಳಿಗೆ ನಿಷೇಧದ ಬಗ್ಗೆ ನಿಷೇಧದ ಬಗ್ಗೆ ಅರಿವನ್ನು ಕೂಡ ಮೂಡಿಸಲು ಸೂಚಿಸಿತ್ತು.

ಯಾವ ಪ್ಲಾಸ್ಟಿಕ್ ವಸ್ತುಗಳಿಗೆ ನಿಷೇಧ

ಪ್ಲಾಸ್ಟಿಕ್ ಕಡ್ಡಿಗಳೊಂದಿಗೆ ಇಯರ್‌ಬಡ್‌ಗಳು, ಬಲೂನ್‌ಗಳಿಗೆ ಪ್ಲಾಸ್ಟಿಕ್ ಸ್ಟಿಕ್‌ಗಳು, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್‌ಗಳು, ಐಸ್‌ಕ್ರೀಮ್ ಸ್ಟಿಕ್‌ಗಳು, ಅಲಂಕಾರಕ್ಕಾಗಿ ಥರ್ಮಾಕೋಲ್, ಪ್ಲೇಟ್‌ಗಳು, ಪ್ಲಾಸ್ಟಿಕ್ ಕಪ್‌ಗಳು, ಗ್ಲಾಸ್‌ಗಳು, ಫೋರ್ಕ್‌, ಚಮಚ, ಚಾಕು, ಟ್ರೇಗಳು, ಪ್ಯಾಕೇಜಿಂಗ್ ಫಿಲ್ಮ್‌, ಬಾಕ್ಸ್‌, ಆಮಂತ್ರಣ ಪತ್ರ, ಸಿಗರೇಟ್ ಪ್ಯಾಕೆಟ್‌, 100 ಮೈಕ್ರಾನ್‌ಗಿಂತ ತೆಳುವಾದ ಪ್ಲಾಸ್ಟಿಕ್ ಅಥವಾ ಪಿವಿಎಸ್‌ ಬ್ಯಾನರ್‌ಗಳ ಬಳಕೆ ಮತ್ತು ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸದ್ಯಕ್ಕೆ ಕಾಂಪೋಸ್ಟೇಬಲ್ ಕಸ ವಿಲೇವಾರಿ ಚೀಲಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.

‘ಥರ್ಮಾಕೋಲ್ ಮತ್ತು ವಿಸ್ತರಿತ ಪಾಲಿಸ್ಟೈರೀನ್ ಸೇರಿದಂತೆ ಏಕ-ಬಳಕೆಯ ಪ್ಲಾಸ್ಟಿಕ್‌ಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಲ್ಲಿ ತಿಳಿಸಲಾಗಿದೆ.

ಚಿಲ್ಲರೆ ಮಳಿಗೆಗಳು, ಹೂವು, ಹಣ್ಣು, ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿಗಳು, ಔಷಧದ ಅಂಗಡಿ, ಬೇಕರಿಗಳು, ಮಾಂಸ ಮಾರಾಟದ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕೈಚೀಲಗಳ ಬಳಕೆ ನಡೆಯುತ್ತಿದೆ. ಗ್ರಂಥಿಕೆ ಅಂಗಡಿಗಳು ಸಹ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ನೀಡುತ್ತಿವೆ. ಸಗಟು ಮಳಿಗೆಗಳ ಮಾಲೀಕರು ಯಾವುದೇ ಅಂಜಿಕೆಯಿಲ್ಲದೆ ಪ್ಲಾಸ್ಟಿಕ್‌ ಕೈಚೀಲ, ತಟ್ಟೆ, ಲೋಟಗಳ ಮಾರಾಟ ಮಾಡುತ್ತಿದ್ದಾರೆ

ಯಾವುದೇ ಗ್ರಾಹಕ ಇರಲಿ ಆತನ ಕೈಯಲ್ಲಿ ಪ್ಲಾಸ್ಟಿಕ್‌ ಚೀಲ ಇರದೇ ಮನೆಯತ್ತ ಮುಖ ಮಾಡಲಾರ. ರಸ್ತೆ ಬದಿ ಹೂವು, ಹಣ್ಣಿನ ವ್ಯಾಪಾರಿಗಳು ಕೂಡ ಪ್ಲಾಸ್ಟಿಕ್‌ ಕವರ್‌ ಇಲ್ಲದೆ ಖರೀದಿಗೆ ಇಳಿಯಲಾರದಂತಹ ಪರಿಸ್ಥಿತಿಯಿದೆ. ಪ್ಲಾಸ್ಟಿಕ್‌ ನೀಡದೆ ಹೋದರೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಪ್ಲಾಸ್ಟಿಕ್‌ ನೀಡಿದರೆ ದಂಡ ಕಟ್ಟಬೇಕಾಗುತ್ತದೆ. ನಮ್ಮ ಅಂಗಡಿಯಲ್ಲಿ ಕೊಟ್ಟಿಲ್ಲ ಎಂದರೆ ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾರೆ. ಪ್ಲಾಸ್ಟಿಕ್‌ ನಿಷೇಧವಾಗಿದೆ ಎಂದು ಹೇಳಿದರೆ ಗಲಾಟೆ ಮಾಡಲು ಆರಂಭಿಸುತ್ತಾರೆ. ಹೀಗಾಗಿ ಪ್ಲಾಸ್ಟಿಕ್‌ ನಿಷೇಧ ಮತ್ತು ಅದರ ಬಳಕೆ ಅಪಾಯದ ಬಗ್ಗೆ ಅಧಿಕಾರಿಗಳು ಜನರಿಗೆ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ

ಗುಜರಾತ್‌ನಿಂದ ಕ್ಯಾರಿಬ್ಯಾಗ್‌ಗಳ ರವಾನೆ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಹುಬ್ಬಳ್ಳಿ ಸಿಟಿಯ ಹೊರ ಮತ್ತು ಒಳಗೆ ಅಕ್ರಮವಾಗಿ ಉತ್ಪಾದಿಸುತ್ತಿರುವ ಪ್ಲಾಸ್ಟಿಕ್‌ ಘಟಕಗಳು ಗೊತ್ತಿದರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಆದರೆ ನಗರದಲ್ಲಿ ಉತ್ಪಾದನೆ ಆಗುವುದಕ್ಕಿಂತ ಅಧಿಕ ಸಂಖ್ಯೆಯಲ್ಲಿ ಹೊರ ರಾಜ್ಯಗಳಿಂದ ವಾಣಿಜ್ಯ ನಗರಿಗೆ ಪೂರೈಕೆ ಆಗುತ್ತಿದೆ ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರು ಕೂಡ ಕಣ್ಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಕಾರಣವಾಗಿದೆ. ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಪ್ರವೇಶಿಸುತ್ತಿರುವ ಕ್ಯಾರಿಬ್ಯಾಗ್‌ಗಳು ಪ್ಲಾಸ್ಟಿಕ್‌ ಹಾವಳಿಗೆ ಕಾರಣವಾಗಿದೆ ಅಂತಾನೆ ಹೇಳಬಹುದು

ಹುಬ್ಬಳ್ಳಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲೇ ಪ್ಲಾಸ್ಟಿಕ್‌ ಬಳಕೆ ಅಧಿಕವಿದೆ. ಗ್ರಾಹಕರು ಎಲ್ಲೆಂದರಲ್ಲಿ ಬೀಸಾಡುವ ಕಾರಣ ಅವು ಮಳೆ ಬಂದಾಗ ಚರಂಡಿಯಲ್ಲಿ ನೀರು ತುಂಬಿ ಉಕ್ಕಿಹರಿಯಲು ಕೂಡ ಕಾರಣವಾಗುತ್ತದೆ. ಈ ಬಗ್ಗೆ ಜನರು ಕೂಡ ಎಚ್ಚೆತ್ತುಕೊಳ್ಳಬೇಕು ಜೊತೆಗೆ ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕಿದೆ

ನಮ್ಮ ನ್ಯೂಸ್ 88 ಕವರ್ ತಂಡ ಎಲ್ಲ ಪ್ಲಾಸ್ಟಿಕ್ ಮಳಿಗೆ ಮತ್ತು ತಯಾರಿಕಾ ಘಟಕಕ್ಕೆ ಹೋಗಿ ಎಲ್ಲ ಸತ್ಯಾ ಸತ್ಯತೆ ಬಿಚ್ಚಿಡಲು ಟೊಂಕ ಕಟ್ಟಿ ಹೋರಾಡಲು ಸಜ್ಜಾಗಿದೆ ಅದನ್ನು ನೋಡಿ ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಇಲ್ಲವಾ ಎಂಬುದನ್ನ ಕಾದು ನೋಡಬೇಕಾಗಿದೆ….

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments