ಹುಬ್ಬಳ್ಳಿ : ಅನಾಮಧೇಯ ಪತ್ರದಿಂದ ಬೆದರಿಕೆ ಬಂದ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಗೋಪನಕೊಪ್ಪ ಮೂಲದ ಶಿಕ್ಷಕಿ ದೀಪಾ ಅಡವಿಮಠ ಮನೆಗೆ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ,ಕಾಂಗ್ರೆಸ್ ಮುಖಂಡ ಸುನೀಲ್ ಮಠಪತಿ,ಪ್ರಕಾಶ್ ಜಾಧವ, ಬೇಟಿ ನೀಡಿ ದೈರ್ಯ ತುಂಬಿದರು
ಮೂರು ದಿನಗಳ ಹಿಂದೆ ಪೋಸ್ಟ್ ಮೂಲಕ ಶಿಕ್ಷಕಿ ದೀಪಾ ಹೊಂಗಲಮಠ ಅವರಿಗೆ ಪತ್ರ ಬಂದಿದ್ದು ನೇಹಾ ಹಿರೇಮಠ ಹಾಗು ಅಂಜಲಿ ಅಂಬಿಗೇರ ಮಾದರಿಯಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.ಈ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ದೀಪಾ ಕುಟುಂಬ ದೂರು ಕೂಡ ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ
ಕುಟುಂಬಸ್ಥರೊಂದಿಗೆ ಮಾತನಾಡಿದ ರಜತ್ ಉಳ್ಳಾಗಡ್ಡಿಮಠ, ಯಾವುದಕ್ಕೂ ಭಯ ಪಡಬೇಡಿ ನಿಮ್ಮೊಂದಿಗೆ ನಾವು ಇದ್ದೇವೆ ಎನ್ನುವ ಅಭಯ ನೀಡಿದರು.ಅಲ್ಲದೆ ಈಗಾಗಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ತಪ್ಪಿತಸ್ಥರನ್ನು ಪತ್ತೆ ಹಚ್ಚಿಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಶಶಿಧರ ಗಾಜಿ,ಅಶೋಕ ಕಲಾದಗಿ,ನರೇಂದ್ರ ಟೀಕಂದರ್ ಹಾಗು ಹನುಮಂತ ಶಿರಗುಪ್ಪಿ ಉಪಸ್ಥಿತರಿದ್ದರು.