ಧಾರವಾಡದ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಧಾರವಾಡ ಗ್ರಾಮೀಣ ಮತ್ತು ನಗರ ತಾಲ್ಲೂಕುಗಳಲ್ಲಿ ಈತನಕ ನಡೆದ ನಾಲ್ಕು ಮಧ್ಯವರ್ಜಿನ ಶಿಬಿರದಲ್ಲಿ ಭಾಗವಹಿಸಿ ಪಾನ ಮುಕ್ತರಾದ ನವಜೀವನ ಸಮಿತಿಯ ಸದಸ್ಯರನ್ನು ಒಟ್ಟು ಸೇರಿಸಿ ನವಜೀವನೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸಂತೋಷ್ ಆರ್ ಶೆಟ್ಟಿ ಅವರು ಚದುರಿ ಹೋಗಿರುವ ಸದಸ್ಯರನ್ನು ಒಟ್ಟುಗೂಡಿಸಿ ಅನುಪಾಲನೆ ಮಾಡುವ ಕೆಲಸ ಅಭಿನಂದನೆಗೆ ಅರ್ಹವಾಗಿದೆ ಎಂದರು.
*ಮುಖ್ಯ ಅತಿಥಿಗಳಾಗಿ ಧಾರವಾಡ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ಶ್ರೀಮತಿ ದಯಾಶೀಲರವರು* ಕಷ್ಟದ ಜೀವನದಿಂದ ನೆಮ್ಮದಿಯ ಬದುಕನ್ನ ಮಾಡುತ್ತಿರುವ ನವ ಜೀವನ ಸದಸ್ಯರು ಮುಂದೆ ದಾರಿ ತಪ್ಪದೇ ಇರಬೇಕೆಂದರೆ ಯೋಜನೆಯ ಕಾರ್ಯಕರ್ತರ ಜೊತೆ ಮತ್ತು ಯೋಜನೆಯ ಕಾರ್ಯಕ್ರಮಗಳ ಜೊತೆ ನಿರಂತರ ಸಂಬಂಧ ಇಟ್ಟುಕೊಂಡಾಗ ಅಭಿವೃದ್ಧಿಯ ಜೊತೆಗೆ ಸಾಧಕರು ಎಣಿಸಿ ಪೂಜ್ಯರ ಉದ್ದೇಶ ಈಡೇರಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ವಸಂತ ಅರ್ಕಾಚಾರ, ಪತ್ರಕರ್ತರಾದ ಗುರುರಾಜ್ ಸಂದರ್ಭದಲ್ಲಿ ಪೂರಕವಾಗಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮಕ್ಕೆ ಮುಂಚೆ ನವಜೀವನ ಸಮಿತಿಯ ಸದಸ್ಯರಿಂದ ಮಂಜುನಾಥ ಸ್ವಾಮಿಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಧಾರವಾಡ ಗ್ರಾಮೀಣ ತಾಲೂಕಿನ ಯೋಜನಾಧಿಕಾರಿ ಅಶೋಕ್ ರವರು ನಿರ್ವಹಿಸಿ, ಧಾರವಾಡ ನಗರ ಯೋಜನಾಧಿಕಾರಿ ಮಯೂರ ರವರು ಹೊಂದಿಸಿದರು, ಅನಿಸಿಕೆಯನ್ನು ನವಜೀವನ ಸದಸ್ಯರಾದ ಬಸು ಬಡುಕರಿ & ವಿಜಯಲಕ್ಷ್ಮಿ ವ್ಯಕ್ತಪಡಿಸಿದರು. ಈ ಸಂದರ್ಭ ಧಾರವಾಡ ಜನಜಾಗೃತಿ ಕಾರ್ಯಕ್ರಮದ ಯೋಜನಾಧಿಕಾರಿ ಭಾಸ್ಕರ್ ಮನ ಭೇಟಿಯ ಉದ್ದೇಶ, ಸಂಘಟನೆ, ನವಜೀವನೋತ್ಸವ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಎರಡು ತಾಲೂಕುಗಳಲ್ಲಿ ಮನೆ ಭೇಟಿಯನ್ನು ನಡೆಸಿ ಸಂಘಟನೆಗೆ ಸಹಕರಿಸಿದ ಆರೋಗ್ಯ ಕಾರ್ಯಕರ್ತರಾದ ಶ್ರೀಮತಿ ಜಯಲಕ್ಷ್ಮಿ, ಜನಜಾಗೃತಿ ಮೇಲ್ವಿಚಾರಕ ಉಮೇಶ್, ಎರಡು ತಾಲೂಕುಗಳ ಮೇಲ್ವಿಚಾರಕರು ಮತ್ತು ಪೋಷಕರು ಉಪಸ್ಥಿತರಿದ್ದರು.