ಧಾರವಾಡ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ತಮ್ಮ ಲೋಕಸಭಾ ಚುನಾವಣೆಯಲ್ಲಿ ತಮ್ಮ ಆಸ್ತಿ ಘೋಷಣೆ ಮಾಡಿದ್ದು, ಕಳೆದ ವರ್ಷದ ಚುನಾವಣೆಯಲ್ಲಿ ಘೋಷಣೆ ಮಾಡಿಕೊಂಡಿದ್ದ ಆಸ್ತಿಗಿಂತ 7 ಕೋಟಿ ಆಸ್ತಿಯನ್ನು ಹೆಚ್ಚಿಸಿಕೊಂಡಿರುವದಾಗಿ ಘೋಷಿಸಿಕೊಂಡಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೋಟ್ಯಾಧೀಶರರಾಗಿದ್ದು, ಜೋಶಿ ಕುಟುಂಬದ ಒಟ್ಟು ಆಸ್ತಿ 21,09,60,953 ಕೋಟಿಯಾಗಿದೆ. ಕಳೆದ 5 ವರ್ಷದಲ್ಲಿ 7 ಕೋಟಿ ಆಸ್ತಿ ಹೆಚ್ಚಳವಾಗಿದೆ. ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಜೋಶಿ ಕುಟುಂಬ ಒಟ್ಟು ಆಸ್ತಿ 14.71 ಕೋಟಿ ಇತ್ತು. ಆದ್ರೆ ಈ ಭಾರಿ ಜೋಶಿ ಸ್ವಂತ ಆಸ್ತಿಯಲ್ಲಿಯೂ ಏರಿಕೆಯಾಗಿದೆ. ಪ್ರಹ್ಲಾದ್ ಜೋಶಿಯವರ ವೈಯಕ್ತಿಕ ಆಸ್ತಿ 13,97,29,450 ಕೋಟಿ.
ಕಳೆದ ಚುನಾವಣೆಯಲ್ಲಿ ಜೋಶಿ ಒಟ್ಟು ಆಸ್ತಿ ಮೌಲ್ಯ 11,13 ಕೋಟಿ ಇತ್ತು.
ಆದ್ರೆ ಈ ಚುನಾವಣೆಯ ಅಫಡವಿಟ್ ನಲ್ಲಿ ಆಸ್ತಿ ಜೊತೆಗೆ ಜೋಶಿ ಸಾಲದಲ್ಲಿ ಕೂಡಾ ಏರಿಕೆಯಾಗಿದೆ. ಕಳೆದ ಚುನಾವಣೆಯಲ್ಲಿ 5.17 ಕೋಟಿ ಸಾಲ ಹೊಂದಿದ್ದರು. ಈಗ 6.63 ಕೋಟಿ ಸಾಲವಿದೆ.
ಪ್ರಹ್ಲಾದ ಜೋಶಿ ವೈಯಕ್ತಿಕ ಚರಾಸ್ತಿ 2.72 ಕೋಟಿ. ಪ್ರಹ್ಲಾದ ಜೋಶಿ ಒಟ್ಟು ಸ್ಥಿರಾಸ್ತಿ 11.24 ಕೋಟಿ.
ಪತ್ನಿ ಜ್ಯೋತಿ ಚರಾಸ್ತಿ 5.93 ಕೋಟಿ, ಸ್ಥಿರಾಸ್ತಿ 86,39 ಲಕ್ಷ.
ಪತ್ನಿ ಜ್ಯೋತಿ ಹೆಸರಿನಲ್ಲಿ1.37 ಕೋಟಿ ಸಾಲವಿದೆ. ಜೋಶಿಯವರ ಬಳಿ 184 ಗ್ರಾಂ ಮಾತ್ರ ಚಿನ್ನ, 5 ಕೇಜಿ ಬೆಳ್ಳಿ ಇದೆ. ಪತ್ನಿ ಜ್ಯೋತಿ ಬಳಿ 500 ಗ್ರಾಂ ಚಿನ್ನ ಹಾಗೂ 2 ಕೇಜಿ ಬೆಳ್ಳಿ ಇದೆ. ಪುತ್ರಿ ಅನನ್ಯಾ ಬಳಿ 250 ಗ್ರಾಂ ಚಿನ್ನ ಹಾಗೂ 32,03,449 ರೂ. ಮೌಲ್ಯದ ಆಸ್ತಿ ಇದೆ. ಆದ್ರೆ ಪ್ರಹ್ಲಾದ್ ಜೋಶಿಯವರ ಬಳಿ ಯಾವುದೇ ಸ್ವಂತ ವಾಹನ ಇಲ್ಲ ಎಂದು ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.