Monday, December 23, 2024
spot_img
Homeವಿಶೇಷ ಸುದ್ದಿಗಳುಕರವೇ ಜಿಲ್ಲಾಧ್ಯಕ್ಷ ಲೂತಿಮಠ ನೇತೃತ್ವದಲ್ಲಿ ಭರ್ಜರಿ ಕಾರ್ಯಚರಣೆ…ಒಂದು ಕ್ವಿಂಟಲ್ ಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ…

ಕರವೇ ಜಿಲ್ಲಾಧ್ಯಕ್ಷ ಲೂತಿಮಠ ನೇತೃತ್ವದಲ್ಲಿ ಭರ್ಜರಿ ಕಾರ್ಯಚರಣೆ…ಒಂದು ಕ್ವಿಂಟಲ್ ಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ…

ಹುಬ್ಬಳ್ಳಿ: ನಗರದ ಪ್ಲಾಸ್ಟಿಕ್ ಅಂಗಡಿವೊಂದರಲ್ಲಿ ನಿಷೇಧಿತ ಸುಮಾರು ಒಂದು ಕ್ವಿಂಟಲ್ ಗೂ ಹೆಚ್ಚು ಪ್ಲಾಸ್ಟಿಕ್ ನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ನೇತೃತ್ವದಲ್ಲಿ ಹು-ಧಾ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡರು.

ನಗರದ ಉಳ್ಳಾಗಡ್ಡಿ ಓಣಿಯ ಸಜ್ಜನ ಎಜೆನ್ಸೀಸ್ ಹಾಗೂ ಸಜ್ಜನ ಪ್ಲಾಸ್ಟಿಕ್ ಎಂಬ ಅಂಗಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಮಾಹಿತಿ ಮೇರೆಗೆ ಸ್ಥಳ ಆಗಮಿಸಿದ ವಲಯ ಕಛೇರಿ ೯ ರ ವ್ಯಾಪ್ತಿಯ ಪಾಲಿಕೆ ಆರೋಗ್ಯ ಅಧಿಕಾರಿಯಾದ ವಾಯ್.ಎನ್.ಯರಗುಂಟಿ ಹಾಗೂ ವಲಯ ಸಹಾಯಕ ಆಯುಕ್ತರಾದ ಕೆ.ಎಫ್ ಕಟಗಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಅಕ್ರಮವಾಗಿ ನಿಷೇಧಿತ ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡು ೨೦ ಸಾವಿರ ದಂಡ ವಿಧಿಸಿದ್ದಾರೆ.

ಈ ವೇಳೆ ಶಹರ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ ಮಂಜುನಾಥ ಲೂತಿಮಠ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments