Sunday, December 22, 2024
spot_img
Homeಸಿನಿಮಾ‘ಈ ಸಿನಿಮಾ ಬಗ್ಗೆ ಮಾತಾಡಿದ್ರೆ ಕಣ್ಣೀರು ಬರುತ್ತೆ’; ಗಳಗಳನೆ ಅತ್ತ ಬಿಗ್​ ಬಾಸ್​ ಶಶಿ

‘ಈ ಸಿನಿಮಾ ಬಗ್ಗೆ ಮಾತಾಡಿದ್ರೆ ಕಣ್ಣೀರು ಬರುತ್ತೆ’; ಗಳಗಳನೆ ಅತ್ತ ಬಿಗ್​ ಬಾಸ್​ ಶಶಿ

ರೈತನಾಗಿ, ಬಿಗ್​ ಬಾಸ್​ ಬಿನ್ನರ್ (Bigg Boss Kannada Winner)​ ಆಗಿ ಖ್ಯಾತಿ ಪಡೆದ ಶಶಿ ಅವರು ‘ಮೆಹಬೂಬಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈಗ ತೆರೆಕಾಣಲು ಸಜ್ಜಾಗಿದೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಎಮೋಷನಲ್​ ಆಗಿ ಮಾತನಾಡಿದ್ದಾರೆ. ತುಂಬ ಕಷ್ಟಪಟ್ಟು ‘ಮೆಹಬೂಬಾ’ ಸಿನಿಮಾ (Mehabooba Movie) ಮಾಡಿರುವ ಅವರು ಗಳಗಳನೆ ಅತ್ತಿದ್ದಾರೆ. ಶಶಿ ಮತ್ತು ಪಾವನಾ ಗೌಡ ಅವರು ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಮಾರ್ಚ್​ 15ರಂದು ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರಕ್ಕಾಗಿ ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಂಡು ವೇದಿಕೆಯಲ್ಲೇ ಶಶಿ (Bigg Boss Shashi) ಕಣ್ಣೀರು ಹಾಕಿದ್ದಾರೆ. ‘ನನ್ನ ಜೀವನದಲ್ಲಿ ಮೆಹಬೂಬಾ ಸಿನಿಮಾ ತುಂಬ ಮುಖ್ಯ. ಬಿಗ್​ ಬಾಸ್​ ಗೆದ್ದ ನಂತರ ಹಲವು ಅವಮಾನ ಅನುಭವಿಸಿದ್ದೇನೆ. ಅದಕ್ಕೆಲ್ಲ ಉತ್ತರವಾಗಿ ಈ ಸಿನಿಮಾ ಮೂಡಿಬರಲಿದೆ. ಬಹಳ ಕಷ್ಟಪಟ್ಟು ಚಿತ್ರ ಮಾಡಿದ್ದೇವೆ. ಈ ಸಿನಿಮಾ ಬಗ್ಗೆ ಮಾತನಾಡಿದರೆ ಕಣ್ಣೀರು ಬರುತ್ತದೆ’ ಎಂದು ಅವರು ಅತ್ತಿದ್ದಾರೆ. ಕಣ್ಣೀರು ತಡೆಯಲಾಗದೇ ಒಂದೆರಡು ಕ್ಷಣ ಅವರು ವೇದಿಕೆಯಿಂದ ಪಕ್ಕಕ್ಕೆ ಸರಿದಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments