ಹೊರಗಡೆ ಇದ್ದಾಗ ನಟ ದರ್ಶನ್ ಅವರು ಐಷಾರಾಮಿ ಜೀವನ ನಡೆಸುತ್ತಿದ್ದರು. ಆದರೆ ಜೈಲಿನಲ್ಲಿ ಅವರ ಪರಿಸ್ಥಿತಿ ಕಷ್ಟವಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಖೈದಿ ಒಬ್ಬರು ದರ್ಶನ್ನ ಭೇಟಿ ಮಾಡಿದ ಬಗ್ಗೆ ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ತುರುವನೂರು ಸಿದ್ಧಾರೂಢ ಅವರು ಜೈಲುವಾಸ ಅನುಭವಿಸಿದ್ದಾರೆ. ಸನ್ನಡತೆ ಆಧಾರದಲ್ಲಿ ಜೈಲಿಂದ ಅವರು ರಿಲೀಸ್ ಆಗಿದ್ದಾರೆ. ಅವರು ದರ್ಶನ್ ಅಭಿಮಾನಿ. ವಿಶೇಷ ಎಂದರೆ ಜೈಲಲ್ಲಿ ದರ್ಶನ್ ಅವರನ್ನು ಭೇಟಿ ಮಾಡಲು ತುರುವನೂರು ಸಿದ್ಧಾರೂಢ ಅವರಿಗೆ ಅವಕಾಶ ಸಿಕ್ಕಿತ್ತು. ಅವರು ದರ್ಶನ್ನ ಭೇಟಿ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ನಾನು ಜೈಲು ಅಧಿಕಾರಿಗಳ ಬಳಿ ದರ್ಶನ್ ಭೇಟಿಗೆ ಅವಕಾಶ ನೀಡುವಂತೆ ಕೋರಿದೆ. ನನಗೆ ಅವರು ಅವಕಾಶ ಮಾಡಿಕೊಟ್ಟರು. ನಾನು ಅಭಿಮಾನಿ ಎಂದಾಗ ದರ್ಶನ್ಗೆ ಖುಷಿ ಆಯಿತು. ದರ್ಶನ್ ಶೇಕ್ ಹ್ಯಾಂಡ್ ಮಾಡಿದರು. ನನ್ನನ್ನು ತಬ್ಬಿಕೊಂಡರು. ಅವರಿಗೆ ಧ್ಯಾನ ಹೇಳಿಕೊಟ್ಟೆ ಎಂದಿದ್ದಾರೆ ತುರುವನೂರು ಸಿದ್ಧಾರೂಢ.
ಸಾಮಾನ್ಯವಾಗಿ ಜೈಲಿನಲ್ಲಿ ಊಟ ತುಂಬಾ ಕೆಟ್ಟದಾಗಿರುತ್ತೆ ಅನ್ನೋ ಅಭಿಪ್ರಾಯ ಜನರಲ್ಲಿರುತ್ತೆ. ಜೈಲಿನ ಊಟ ಸೇರಲ್ಲ, ತಿನ್ಬೇಕಲ್ಲ ಅನ್ನೋ ಕಾರಣಕ್ಕೆ ಊಟ ಮಾಡ್ಬೇಕು ಅಂತಾ ಹೇಳ್ತಾರೆ. ಇದರ ಬಗ್ಗೆಯೂ ಸಿದ್ದಾರೂಢ ಮಾತನಾಡಿದ್ದಾರೆ. ನಮಗೆ ಊಟ ಅಡ್ಜೆಸ್ಟ್ ಆಗೋದು ತುಂಬಾ ಕಷ್ಟ, ಲಿಸ್ಟ್ನಲ್ಲೇ ಒಂದ್ ರೀತಿ ಇರುತ್ತೆ, ಅಲ್ಲಿ ಕೊಡೋ ಊಟನೇ ಒಂದು ರೀತಿ ಇರುತ್ತೆ ಎಂದು ಸಿದ್ದಾರೂಢ ಆರೋಪಿಸಿದರು.
ನಟ ದರ್ಶನ್ ಅವರ ದೇಹದ ತೂಕ ಕಡಿಮೆ ಆಗುವಂತೆ ಕಾಣುತ್ತಿದೆ ಎಂದಿರುವ ಸಿದ್ಧಾರೂಢ, ಮುಖ ಸಪ್ಪೆ ಆಗಿದೆ, ಬಾಡಿ ಡೌನ್ ಆಗಿದೆ. ಕುರುಕ್ಷೇತ್ರದಂತ ಬಾಡಿ ಇಲ್ಲ, ಹೇರ್ ಸ್ಟೈಲ್ ಹಾಗೇ ಇದೆ. ಸುಮಾರು 12 ನಿಮಿಷ ದರ್ಶನ ಅವರೊಂದಿಗೆ ಇದ್ದೆ, ಪ್ರತಿಕ್ಷಣವೂ ಪಶ್ಚಾತ್ತಾಪ ಪಡುತ್ತಿದ್ದಾರೆ. ಅವರ ಮುಖ, ಕಣ್ಣಲ್ಲಿ ಅದು ಕಾಣುತ್ತಿದೆ. ಪ್ರತಿ ಕ್ಷಣ ಆ ಕುಟುಂಬಕ್ಕೆ ಸಾರಿ ಕೇಳ್ತಿದ್ದಾರೆ ಎಂದು ಸಿದ್ಧಾರೂಡ ಹೇಳಿದ್ದಾರೆ.