Monday, December 23, 2024
spot_img
Homeಕ್ರೈಂಮಾಜಿ ಲವರ್​ಗಾಗಿ ಗಂಡನನ್ನೇ ಕೊಂದ ಹೆಂಡತಿ.. ಪತಿ ಕೊಲೆಗೆ ಹೇಗಿತ್ತು ಮಾಸ್ಟರ್​ ಪ್ಲಾನ್​..?

ಮಾಜಿ ಲವರ್​ಗಾಗಿ ಗಂಡನನ್ನೇ ಕೊಂದ ಹೆಂಡತಿ.. ಪತಿ ಕೊಲೆಗೆ ಹೇಗಿತ್ತು ಮಾಸ್ಟರ್​ ಪ್ಲಾನ್​..?

•ತುಮಕೂರಿನ ಹುಡುಗಿ! ಕಲಬುರಗಿಯ ಹುಡುಗ! ಇನ್​ಸ್ಟಾದಲ್ಲಿ ಪ್ರೀತಿ

•ಲವ್ ಮಾಡಿ ಮದ್ವೆಯಾದ್ಮೇಲೆ ಹಳೇ ಲವ್ವರ್‌ ಮತ್ತೆ ಕನೆಕ್ಟ್‌!

•ಪ್ರಿಯಕರನ ಜೊತೆ ಸೇರಿ ಗಂಡನನ್ನ ಫಿನಿಶ್‌ ಮಾಡಿದ ಪತ್ನಿ!

ಪ್ರೀತಿ ಪ್ರೇಮ ಅನ್ನೋದು ಪುಸ್ತಕದ ಬದನೆಕಾಯಿ ಅನ್ನೋ ಮಾತನ್ನ ಉಪೇಂದ್ರ ಆ ಕಾಲದಲ್ಲೇ ಹೇಳಿ ಬಿಟ್ಟಿದ್ರು.. ಆದ್ರೆ ಆ ಮಾತು ಈ ಜನರೇಷನ್​ನಲ್ಲಿ ನಿಜವಾಗ್ತಿದೆ. ಯಾಕಂದ್ರೆ ಈ ಕಾಲದಲ್ಲಿ ಪ್ರೀತಿ ಅನ್ನೋ ಪದಕ್ಕೆ ಗ್ಯಾರಂಟಿಯೇ ಇಲ್ಲದಂತಾಗಿದೆ. ಪ್ರೀತಿಸಿ ಮದುವೆಯಾದ್ರು ಒಂದು ಅಥವಾ ಎರಡು ವರ್ಷಕ್ಕೆ ಆ ಪ್ರೀತಿಯ ಆಯಸ್ಸು ಮುಗೀತಾ ಇದೆ. ನಾವು ಇವತ್ತು ಹೇಳೋ ಸ್ಟೋರಿಯಲ್ಲೂ ಪ್ರೀತಿಯಾಗಿತ್ತು.. ಮದುವೆಯೂ ಆಗಿತ್ತು.. ಆದ್ರೆ ಪತ್ನಿ ಮೋಹದ ಕಾರಣಕ್ಕೆ ತಾಳಿ ಕಟ್ಟಿದ ಗಂಡ ಹೆಣವಾಗಿದ್ದಾನೆ.

ಹರ್ಷಿತಾ ಎಂಬ ತುಮಕೂರಿನ ಹುಡುಗಿ ಇನ್​ಸ್ಟಾದಲ್ಲಿ ಕಲಬುರಗಿಯ ಪ್ರಕಾಶ್ ಪರಿಚಯವಾಗಿದ್ದ. ಪರಿಚಯ ಪ್ರೀತಿಯಾಗಿತ್ತು. ಆ ಪ್ರೀತಿಗೆ ಮದುವೆ ಮುದ್ರೆ ಬೀಳೋದಿಕ್ಕೆ ಕೂಡ ತಡ ಏನೂ ಆಗಿರಲಿಲ್ಲ. ವಿಚಾರ ಏನಂದ್ರೆ ಮದುವೆಯಾದ್ಮೇಲೆ ಈ ಪ್ರಕಾಶ್​ ಕಲಬುರಗಿ ಬಿಟ್ಟು ಬಂದು ಪತ್ನಿ ಊರಲ್ಲೇ ವಾಸವಿದ್ದ. ಸಂಸಾರ ಚೆನ್ನಾಗಿಯೇ ಇತ್ತು. ಸಾಕ್ಷಿಗೆ ಮುದ್ದಾದ ಮಗು ಕೂಡ ಇದೆ. ಎಲ್ಲವು ಚೆನ್ನಾಗಿತ್ತು ಅನ್ನೋವಾಗಲೇ ಇವರ ಸಂಸಾರಕ್ಕೆ ಮತ್ತೊಬ್ಬ ಎಂಟ್ರಿಯಾಗಿದ್ದ.

ಹರ್ಷಿತಾಗೆ ಮದುವೆಯಾಗೋದಕ್ಕೆ ಮುಂಚೆ ಸೋದರ ಮಾವ ಗೋವಿಂದ ಅಲಿಯಾಸ್ ಗುಂಡ ಅನ್ನೋನ ಜೊತೆ ಲವ್ ಇತ್ತಂತೆ. ಆದ್ರೆ ಈ ಗೋವಿಂದ್ ಅಲಿಯಾಸ್ ಗುಂಡನಿಗೆ ಬೇರೆ ಹುಡುಗಿ ಜೊತೆ ಮದುವೆಯಾಗಿದೆ. ಪ್ರೀತಿ ಮಾಡಿದ ಮಾವ ಹರ್ಷಿತಾಗೆ ಸಿಕ್ಕಿಲ್ಲ. ಆಗ ಹರ್ಷಿತಾಗೆ ಪರಿಚಯ ಆಗಿದ್ದು ಈ ಪ್ರಕಾಶ್… ಇನ್​ಸ್ಟಾದಲ್ಲಿ ಪ್ರಕಾಶ್ ಪರಿಚಯವಾಗಿತ್ತು.. ಹರ್ಷಿತಾಗೆ ಮಾವನ ಪ್ರೀತಿ ಮರೆತು ಹೋಗಿತ್ತು. ಹಾಗಾಗಿ ಈ ಪ್ರಕಾಶ್​ ಜೊತೆಯೇ ಮದುವೆಯಾಗಿದ್ಳು. ಆದ್ರೆ ಕಳೆದೊಂದು ವರ್ಷದ ಹಿಂದೆ ಈ ಹರ್ಷಿತಾ ಮಾವ ಗೋವಿಂದ್​ ಅಲಿಯಾಸ್ ಗುಂಡನಿಗೆ ಡಿವೋರ್ಸ್ ಆಗಿದೆ. ಆಗ ಹರ್ಷಿತಾ ಮತ್ತು ಗೋವಿಂದ ಮತ್ತೆ ಕನೆಕ್ಟ್ ಆಗಿದ್ದಾರೆ. ಅಲ್ಲಿಂದ ಗುಂಡ ಮತ್ತು ಹರ್ಷಿತಾ ಮಧ್ಯೆ ಮತ್ತೆ ಹಳೆ ಪ್ರೀತಿ ಕಂಟಿನ್ಯೂ ಆಗಿದೆ.

ಕೊಲೆಯಾದ ಪತಿ ಪ್ರಕಾಶ್

ಅದ್ಯವಾಗ ಹಳೆ ಪ್ರೀತಿ ಹರ್ಷಿತಾಗೆ ಮತ್ತೆ ಸಿಕ್ತು ಎಲ್ಲ ಬದಲಾಗಿತ್ತು. ಹರ್ಷಿತಾ ಗಂಡನೊಂದಿಗೆ ನೆಟ್ಟಗೆ ಸಂಸಾರ ಮಾಡೋದನ್ನೆ ಬಿಟ್ಟಿದ್ಳು. ಈ ಗೋವಿಂದನ ಜೊತೆಯೇ ಫೋನ್​ನಲ್ಲಿ ಬ್ಯುಸಿಯಾಗಿರ್ತಿದ್ದಳು. ದುರಂತ ಏನಂದ್ರೆ ಗಂಡನನ್ನ ಬಿಟ್ಟು ಓಡಿ ಹೋಗಿ ಎರಡು ತಿಂಗಳು ಈ ಗೊವಿಂದನ ಜೊತೆಯೇ ವಾಸವಿದ್ಲಂತೆ. ಆದ್ರೆ ಈಕೆ ಗಂಡ ಪ್ರಕಾಶ್ ಓಡಿ ಹೋದ ಹರ್ಷಿತಾಳನ್ನ ವಾಪಸ್ ಮನೆಗೆ ಕರ್ಕೊಂಡು ಬಂದಿದ್ದ. ಹೆಂಡತಿನೇ ಅಲ್ವಾ ಅಂತ ಮಾಡಿದ ತಪ್ಪನ್ನ ಕ್ಷಮಿಸಿ ರಾಜಿ ಸಂದಾನ ಮಾಡಿಕೊಂಡಿದ್ದ. ಆದ್ರೂ ಹರ್ಷಿತಾಗೆ ಬುದ್ಧಿ ಬಂದಿರಲಿಲ್ಲ.

ವಾಪಸ್ ಬಂದ ಹರ್ಷಿತಾ ಗಂಡನ ಕತೆ ಮುಗಿಸಬೇಕು ಅಂತಲೇ ಪ್ಲಾನ್ ಮಾಡಿದ್ಲು. ಭಾನುವಾರ ಮುಹೂರ್ತ ಫಿಕ್ಸ್ ಮಾಡಿದ್ಳು. ಅದ್ರಂತೆ ಭಾನುವಾರ ಪ್ರಕಾಶ್​, ಪತ್ತಿ ಹರ್ಷಿತಾ ಮತ್ತು ಮಗು ಮೂವರನ್ನ ಕರ್ಕೊಂಡು ಸಿದ್ದರ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸ್ಕೊಂಡು ಬಂದಿದ್ದ. ಸಂಜೆ 5 ಗಂಟೆಗೆ ಕೊರಟಗರೆಗೆ ಬಂದಿದ್ದ ಹರ್ಷಿತಾ ಮತ್ತು ಪ್ರಕಾಶ್ ರಾತ್ರಿ 8 ಗಂಟೆತನಕ ಅಲ್ಲೆ ಇದ್ದು ವಾಪಸ್ ಊರಿಗೆ ಬಂದಿದ್ರು. ಈ ವೇಳೆ ಹರ್ಷಿತಾ ತಮ್ಮ ಸೋಮ ಮಾವನಿಗೆ ಕಾಲ್ ಮಾಡಿ ನಾನು ಕುಡಿದೀದಿನಿ ತುಂಬಾ ಟೈಟ್ ಆಗಿದೀನಿ ಬಂದು ಕರ್ಕೊಂಡು ಹೋಗು ಅಂದಿದ್ದ. ಪ್ರಕಾಶ್ ಬರಲ್ಲ ಅಂದ್ರೂ ಬಿಟ್ಟಿರಲಿಲ್ಲ. ಪದೇ ಪದೇ ಫೋನ್ ಮಾಡಿ ಪ್ರಕಾಶ್​ನನ್ನ ತಾನಿದ್ದ ಜಾಗಕ್ಕೆ ಕರೆಸಿಕೊಂಡಿದ್ದ.
ಬಾಮೈದನ ಮಾತು ನಂಬಿ ಪ್ರಕಾಶ್ ಸೋಮ ಹೇಳಿದ ಜಾಗಕ್ಕೆ ಬಂದಿದ್ದ. ಪ್ರಕಾಶ್ ಬಂದಿದ್ದೆ ತಡ ಹರ್ಷಿತಾಳ ಮಾವ ಗುಂಡ, ತಮ್ಮ ಸೋಮ ಮತ್ತು ಆತನ ಗೆಳೆಯ ರಂಗಸಾಮಯ್ಯ.

ಮೂವರು ಪ್ರಕಾಶ್ ಜೊತೆ ಗಲಾಟೆ ಶುರು ಮಾಡಿದ್ದಾರೆ. ಹರ್ಷಿತಾ ವಿಚಾರಕ್ಕೆ ನಡೆದ ಮಾತುಕತೆ ತೀವ್ರ ಸ್ವರೂಪಕ್ಕೆ ಹೋಗಿ ದೊಡ್ಡ ಗಲಾಟೆ ನಡೆದು ಹೋಗಿದೆ. ಕೊನೆಗೆ ಇವರ ಸಹವಾಸ ಬೇಡ ಅಂತ ಪ್ರಕಾಶ್ ಬೈಕ್ ಹತ್ತಿ ಅಲ್ಲಿಂದ ಹೊರಡಬೇಕು. ಆದ್ರೆ ಈ ಪಾಪಿಗಳು ಬಿಡಬೇಕಲ್ಲ. ಕಬ್ಬಿಣದ ರಾಡ್​ನಿಂದ ಪ್ರಕಾಶ್​ನ ತಲೆಗೆ ಹೊಡೆದಿದ್ದಾರೆ. ಪೆಟ್ಟು ಬಿದ್ಧ ರಭಸಕ್ಕೆ ಪ್ರಕಾಶ್ ಕೆಳಗೆ ಬಿದ್ದಿದ್ದಾನೆ. ಆಗ ಈ ಹರ್ಷಿತಾ ಮಾವ ಗುಂಡ ಡ್ರಾಗರ್​ನಿಂದ ಪ್ರಕಾಶ್ ಎದೆಗೆ ಚುಚ್ಚಿ ಜೀವ ತೆಗೆದು ಬಿಟ್ಟಿದ್ದಾನೆ. ಸ್ಥಳದಲ್ಲೇ ಪ್ರಕಾಶ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕೊಲೆ ಮಾಡಿದ ಬಳಿಕ ಅದನ್ನ ಆ್ಯಕ್ಸಿಡೆಂಟ್ ಅಂತ ತೋರಿಸೋದಕ್ಕೆ ಬೈಕ್ ಎಲ್ಲ ಬೀಳಿಸಿ ಪ್ರಕಾಶ್ ಹೆಣವನ್ನು ಬೀಸಾಕಿ ಬಂದಿದ್ರು. ಆದ್ರೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಶುರು ಮಾಡ್ದಾಗ ಕೊಲೆಗಾರರ ರಹಸ್ಯ ಬಯಲಾಗಿದೆ.

ಪ್ರಕಾಶ್ ಮೃತದೇಹವನ್ನು ಪೋಸ್ಟ್​ಮಾರ್ಟಂಗೆ ಕಳಿಸದಾಗ ತಲೆ ಮತ್ತು ದೇಹ ಬಿಟ್ಟು ದೇಹದ ಬೇರೆ ಯಾವ ಭಾಗದಲ್ಲೂ ಗಾಯ ಆಗಿರಲಿಲ್ಲ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಆಗ ಪ್ರಕಾಶ್ ಪೋನ್ ಡಿಟೇಲ್ಸ್​ ಚೆಕ್ ಮಾಡ್ದಾಗ ಹರ್ಷಿತಾ ತಮ್ಮ ಸೋಮ ಕರೆ ಮಾಡಿರೋದು ಗೊತ್ತಾಗಿದೆ. ತಕ್ಷಣ ಪೊಲೀಸರು ಸೋಮನನ್ನ ಎತ್ತಾಕೊಂಡು ಬಂದು ಸರಿಯಾಗಿ ಟ್ರೀಟ್​ಮೆಂಟ್ ಕೊಟ್ಟಿದ್ದಾರೆ. ಆಗ ಸೋಮ ಅಸಲಿ ಸತ್ಯವನ್ನು ಪೊಲೀಸರ ಮುಂದೆ ಕಕ್ಕಿದ್ದಾನೆ. ಆಗ್ಲೇ ನೋಡಿ ಈ ಕೊಲೆಯ ರಸಹ್ಯ ಬಟಾಬಯಲಾಗಿರೋದು.

ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪೊಲೀಸರು ಮೂವರನ್ನ ಅರೆಸ್ಟ್ ಮಾಡಿದ್ರು. ಹರ್ಷಿತಾ, ಸೋಮಶೇಖರ್, ರಂಗಸ್ವಾಮಯ್ಯ ಸೇರಿ ಮೂವರನ್ನೂ ಜೈಲಿಗೆ ತಳ್ಳಲಾಗಿದ್ದು, ಮುಖ್ಯ ಆರೋಪಿ ಗೋವಿಂದ ಪರಾರಿಯಾಗಿದ್ದ. ಎರಡು ದಿನ ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿ ಗೋವಿಂದನ್ನ ಸಹ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments