ಚಿನ್ನವನ್ನು ಪ್ರೀತಿಸದವರು ಯಾರು ಇರಲಿಕ್ಕಿಲ್ಲ. ಹೌದು ಹೆಂಗಳೆಯರ ಪ್ರೀತಿಯ ಚಿನ್ನಕ್ಕೆ ಲಕ್ಷ್ಮೀ ಸ್ಥಾನವನ್ನು ಕೂಡ ನೀಡಲಾಗಿದ್ದು ಧರಿಸಿ ಸಂತೋಷ ಪಡುವ ಜನರು ಕಡಿಮೆಯೇನಿಲ್ಲ. ಕೇಂದ್ರ ಸರ್ಕಾರ ಬಜೆಟ್ 2024 ನಲ್ಲಿ ಆಮದು ಸುಂಕ ಕಡಿತ ಮಾಡುವ ಮೂಲಕ ಭರ್ಜರಿ ಸಿಹಿ ಸುದ್ದಿ ನೀಡಿತ್ತು. ಇದೀಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಬಜೆಟ್ ಬಳಿಕ ಮೂರೇ ದಿನದಲ್ಲಿ ಜುಲೈ 25ರಂದು ಮಧ್ಯಾಹ್ನ 5000 ರೂಪಾಯಿ ಕಡಿಮೆ ಆಗಿದೆ.
ಇಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 950 ರೂಪಾಯಿ ಇಳಿಕೆಯಾಗಿ 65,150 ರೂಪಾಯಿಗಳಿಗೆ ಮತ್ತು 100 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 9,500 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಚಿನ್ನದ ಬೆಲೆ 6,41,500 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಈದೇ ವೇಳೆ ಸಮಯದಲ್ಲಿ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1.48% ನಷ್ಟು ಭಾರಿ ಕುಸಿತ ಕಂಡುಬಂದಿದೆ. ಇದೇ ಜುಲೈ 22 ರಿಂದ ಜುಲೈ 25ರವರೆಗೆ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 3800 ರೂಪಾಯಿಗಳ ಭಾರಿ ಕುಸಿತ ಕಂಡುಬಂದಿದೆ.
ದೇಶದ ಆಭರಣ ವ್ಯಾಪಾರಿಗಳು ಚಿನ್ನದ ಆಮದು ಮೇಲಿನ ಸುಂಕವನ್ನು ಶೇಕಡಾ 4ರಿಂದ 15ರಷ್ಟು ಇಳಿಕೆ ಮಾಡುವಂತೆ ಒತ್ತಾಯಿಸಿದ್ದರು. ಈ ಕುರಿತು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಅದರಂತೆ ಚಿನ್ನದ ಆಮದು ಸುಂಕ ಇಳಿಕೆ ಮಾಡುತ್ತಿದ್ದಂತೆ ಇವತ್ತಲ್ಲಾ ನಾಳೆ ಚಿನ್ನದ ಬೆಲೆ ಇಳಿಕೆ ಆಗಬಹುದು ಎಂದು ಗ್ರಾಹಕರು ಚಿನ್ನ ಖರೀದಿಗೆ ಮುಂದಾಗಿರಲಿಲ್ಲ. ಸದ್ಯಕ್ಕೆ ಬಂಗಾರದದ ದರ ಕಡಿಮೆ ಆಗಿದ್ದರಿಂದ ಖರೀದಿ ಹೆಚ್ಚಾಗಬಹುದು ಎಂ ನಿರೀಕ್ಷೆಯು ಇದೆ. ಇನ್ನೊಂದು ವಾರದಲ್ಲಿ ಸುಂಕ ಕಡಿತ ಬಳಿಕ ಒಟ್ಟಾರೆ ಎಷ್ಟು ಗರಿಷ್ಠ ದರ ಇಳಿಕೆ ಆಗಲಿದೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.
ಇದುವರೆಗೆ ನಿಯಮಾನುಸಾರ ಆಮದು ಮಾಡಿಕೊಳ್ಳುತ್ತಿದ್ದ ಚಿನ್ನದ ಮೇಲಿನ ಸುಂಕ ಏರಿಕೆ ಆಗಿತ್ತು. ನಂತರ ವರ್ಷದಿಂದ ವರ್ಷಕ್ಕೆ, ಇತ್ತೀಚಿನ ದಿನಗಳಲ್ಲಿ ತಿಂಗಳುಗಳ ಅಂತದಲ್ಲಿ ಚಿನ್ನದ ದರ ಭಾರೀ ಏರಿಕೆ ಆಗುತ್ತಲೇ ಬಂದಿದ್ದು, ಇದೀಗ ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ.