Monday, December 23, 2024
spot_img
Homeನ್ಯೂಸ್ಹುಬ್ಬಳ್ಳಿ ನಗರದ ಮೊದಲ ಕೃತಕ ಮಿಯಾವಾಕಿ ಅರಣ್ಯ ನಿರ್ಮಾಣ: ರಜತ್ ಪೌಂಡೇಶನ್ ಕೊಡುಗೆ

ಹುಬ್ಬಳ್ಳಿ ನಗರದ ಮೊದಲ ಕೃತಕ ಮಿಯಾವಾಕಿ ಅರಣ್ಯ ನಿರ್ಮಾಣ: ರಜತ್ ಪೌಂಡೇಶನ್ ಕೊಡುಗೆ

ಹುಬ್ಬಳ್ಳಿ : ವಿಶ್ವದಲ್ಲೇ ಖ್ಯಾತವಾಗಿರುವ ಮಿಯವಾಕಿ ಅರಣ್ಯ ಪರಿಸರವನ್ನು ಖಾಸಗಿಯಾಗಿ ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿಯ ಮನೋಜ್ ಪ್ಯಾರೆಡೆಸ್ ವಸತಿ ಸಂಕೀರ್ಣದಲ್ಲಿ ಧಾರವಾಡದ ನೇಚರ್‌ಫಸ್ಟ್ ಇಕೋ-ವಿಲೇಜ್ ಮತ್ತು ನೇಚರ್ ರಿಸರ್ಚ್ ಸೆಂಟರ್ ತಂಡದೊಂದಿಗೆ ಯೋಜನೆಯನ್ನು ಪೂರ್ಣಗೊಳಿಸಿದ್ದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ತಮ್ಮ ಪೌಂಡೇಶನ್ ಮೂಲಕ ಇದರ ಸಂಪೂರ್ಣ ವೆಚ್ಚವನ್ನು ರಸಿ ಇತರರಿಗೆ ಮಾದರಿಯಾಗಿದ್ದಾರೆ.

ಮನೋಜ್ ಪ್ಯಾರಡೇಸ್ ನಗರದಲ್ಲಿ ಮಿಯಾವಾಕಿ ಅರಣ್ಯ ಸದ್ಯ ನಿರ್ಮಾಣ ಮಾಡಲಾಗಿದ್ದು ಇದಕ್ಕಾಗಿ
41 ಜಾತಿಗಳ ಸುಮಾರು 1000 ಸ್ಥಳೀಯ ಮರದ ಸಸಿಗಳನ್ನು ಆಯ್ಕೆ ಮಾಡಿ ನೆಡಲಾಗಿದೆ.ಈ ಕಾರ್ಯಕ್ಕೆ ಹೆಚ್ಚಿನ ವೃತ್ತಿಪರ ಮಿಯಾವಾಕಿ ಅರಣ್ಯ ಪರಿಣಿತರನ್ನೇ ಬಳಸಿಕೊಳ್ಳಾಗಿದ್ದು ನಿರ್ವಹಣೆ ಜವಾಬ್ದಾರಿಯನ್ನು ಕೂಡ ಪೌಂಡೇಶನ್ ವಹಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ನೇಚರ್‌ಫಸ್ಟ್ ಇಕೋ-ವಿಲೇಜ್ ಮತ್ತು ನೇಚರ್ ರಿಸರ್ಚ್ ಸೆಂಟರ್ ತಂಡ ಇವರನ್ನು ಶ್ಲಾಘಿಸಿದ್ದು ಆಧುನಿಕ ಜೀವನಶೈಲಿಯಲ್ಲಿ ಇಂತಹ ನಗರ ಅರಣ್ಯಗಳು ಜೀವ ಸಂಕುಲಕ್ಕೆ ಬೇಕಾಗಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments