ಹುಬ್ಬಳ್ಳಿ: ಚುನಾವಣೆ ಅಂದರೆ ದೊಡ್ಡವರು, ಸಣ್ಣವರು ನೋಡದೇ ಕಾಲಿಗೆ ಬಿಳುವುದು ಜನಪ್ರತಿನಿಧಿಗಳು ಅರ್ಥೈಸಿಕೊಂಡ ಸಂಗತಿಯಾಗಿದೆ. ಆದರೆ ತಮ್ಮ ತಮ್ಮ ಪಕ್ಷದವರ ಕಾಲಿಗೆ ಬೀಳುವ ನಡೆ ಸಾಮಾಜಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹೌದು.. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು, ಮಾಜಿ ಸಚಿವ ಬಿ.ಸಿ.ಪಾಟೀಲ ಕಾಲಿಗೆ ನಮಸ್ಕರಿಸಲು ಮುಂದಾಗಿರುವ ವಿಡಿಯೋ ಈಗ ಸಖರ್ ಟ್ರೋಲ್ ಆಗಿದೆ. ಅಲ್ಲದೇ ತನಗಿಂತ ಸಣ್ಣವರ ಕಾಲಿಗೆ ಬೀಳಲು ಮಾಜಿ ಸಿಎಂ ಮುಂದಾಗಿರುವುದು ಚುನಾವಣೆ ಗಿಮಿಕ್ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.
ಇನ್ನೂ ಮಿಸ್ಟರ್ ಬೊಮ್ಮಾಯಿಯವರೇ ಧಮ್ಮು, ತಾಕತ್ತು ಅಂದರೇ ಇದೇನಾ ಅಂತ ವಿಡಿಯೋ ವೈರಲ್ ಮಾಡಿದ್ದಾರೆ.