ಹುಬ್ಬಳ್ಳಿ: ನಗರದ ಪ್ಲಾಸ್ಟಿಕ್ ಅಂಗಡಿವೊಂದರಲ್ಲಿ ನಿಷೇಧಿತ ಸುಮಾರು ಒಂದು ಕ್ವಿಂಟಲ್ ಗೂ ಹೆಚ್ಚು ಪ್ಲಾಸ್ಟಿಕ್ ನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ನೇತೃತ್ವದಲ್ಲಿ ಹು-ಧಾ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡರು.
ನಗರದ ಉಳ್ಳಾಗಡ್ಡಿ ಓಣಿಯ ಸಜ್ಜನ ಎಜೆನ್ಸೀಸ್ ಹಾಗೂ ಸಜ್ಜನ ಪ್ಲಾಸ್ಟಿಕ್ ಎಂಬ ಅಂಗಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಮಾಹಿತಿ ಮೇರೆಗೆ ಸ್ಥಳ ಆಗಮಿಸಿದ ವಲಯ ಕಛೇರಿ ೯ ರ ವ್ಯಾಪ್ತಿಯ ಪಾಲಿಕೆ ಆರೋಗ್ಯ ಅಧಿಕಾರಿಯಾದ ವಾಯ್.ಎನ್.ಯರಗುಂಟಿ ಹಾಗೂ ವಲಯ ಸಹಾಯಕ ಆಯುಕ್ತರಾದ ಕೆ.ಎಫ್ ಕಟಗಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಅಕ್ರಮವಾಗಿ ನಿಷೇಧಿತ ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡು ೨೦ ಸಾವಿರ ದಂಡ ವಿಧಿಸಿದ್ದಾರೆ.
ಈ ವೇಳೆ ಶಹರ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ ಮಂಜುನಾಥ ಲೂತಿಮಠ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು