Tuesday, December 17, 2024
spot_img
Homeರಾಜ್ಯByju’s: ಈ ಮೀಟಿಂಗ್, ಉಚ್ಚಾಟನೆ ಇವೆಲ್ಲಾ ಬೋಗಸ್, ಈಗಲೂ ನಾನೇ ಸಿಇಒ ಎಂದ ಬೈಜು ರವೀಂದ್ರನ್

Byju’s: ಈ ಮೀಟಿಂಗ್, ಉಚ್ಚಾಟನೆ ಇವೆಲ್ಲಾ ಬೋಗಸ್, ಈಗಲೂ ನಾನೇ ಸಿಇಒ ಎಂದ ಬೈಜು ರವೀಂದ್ರನ್

Byju Raveendran’s letter to employees: ಬೈಜೂಸ್ ಸಂಸ್ಥಾಪಕರನ್ನು ಕಂಪನಿಯಿಂದ ಉಚ್ಚಾಟಿಸುವ ನಿರ್ಣಯಕ್ಕೆ ಶುಕ್ರವಾರ ಇಜಿಎಂ ಸಭೆಯಲ್ಲಿ ಬೆಂಬಲ ವ್ಯಕ್ತವಾಗಿತ್ತು ಎಂಬ ಸುದ್ದಿಯನ್ನು ಬೈಜು ರವೀಂದ್ರನ್ ತಳ್ಳಿಹಾಕಿದ್ದಾರೆ. ಸಂಸ್ಥಾಪಕರು ಮತ್ತು ಮಂಡಳಿ ಸದಸ್ಯರ ಉಪಸ್ಥಿತಿ ಇಲ್ಲದೇ ನಡೆದ ಆ ಸಭೆ ಅಸಿಂಧು ಎಂದು ಬಣ್ಣಿಸಿದ್ದಾರೆ. ಸಭೆಯಲ್ಲಿ ನಿರ್ಣಯದ ಪರ ಮತ ಹಾಕಿರುವ ಷೇರುದಾರರ ಒಟ್ಟು ಷೇರುಪಾಲು ಶೇ. 45ಕ್ಕಿಂತ ಹೆಚ್ಚಿಲ್ಲ ಎಂದು ಬೈಜು ರವೀಂದ್ರನ್ ಹೇಳಿದ್ದಾರೆ.

ನವದೆಹಲಿ, ಫೆಬ್ರುವರಿ 25: ಬೈಜೂಸ್ ಸಂಸ್ಥೆಯ ಸಂಸ್ಥಾಪಕರು ಮತ್ತು ಹೂಡಿಕೆದಾರರ ನಡುವಿನ ಜಂಗೀಕುಸ್ತಿ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಷೇರುದಾರರು ಸೇರಿಕೊಂಡು ಸಿಇಒ ಬೈಜು ರವೀಂದ್ರನ್ ಅವರನ್ನು ಒಮ್ಮತದ ಮೂಲಕ ಉಚ್ಚಾಟಿಸಿದ್ದಾರೆ ಎಂದು ಹೂಡಿಕೆದಾರರು ಹೇಳುತ್ತಿದ್ದಾರೆ. ಇವತ್ತು ಬೈಜು ರವೀಂದ್ರನ್ ಅವರೇ ಖುದ್ದಾಗಿ ತಮ್ಮ ಉದ್ಯೋಗಿಗಳಿಗೆ ಪತ್ರ ಬರೆದು, ತಾನೇ ಸಿಇಒ ಆಗಿ ಮುಂದುವರಿಯುತ್ತಿರುವುದಾಗಿ ತಿಳಿಸಿ, ಯಾವುದೇ ವದಂತಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ. ಶುಕ್ರವಾರ ನಡೆದ ಷೇರುದಾರರ ತುರ್ತು ಸಭೆ (EGM- Extraordinary General Meeting) ಒಂದು ಬೋಗಸ್ ನಡೆಯಷ್ಟೇ. ತನ್ನನ್ನು ಉಚ್ಚಾಟಿಸಲಾಗಿದೆ ಎಂದು ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಬೈಜೂಸ್​​ನ ಸಂಸ್ಥಾಪಕರೂ ಆಗಿರುವ ಅವರು (Byju Raveendran) ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ನಮ್ಮ ಕಂಪನಿಯ ಸಿಇಒ ಆಗಿ ಈ ಪತ್ರ ನಿಮಗೆ ಬರೆಯುತ್ತಿದ್ದೇನೆ. ಮಾಧ್ಯಮದಲ್ಲಿ ನೀವು ಓದಿರುವುದು ಸುಳ್ಳು. ನಾನು ಸಿಇಒ ಆಗಿ ಮುಂದುವರಿದಿದ್ದೇನೆ. ಮ್ಯಾನೇಜ್ಮೆಂಟ್ ಬದಲಾವಣೆ ಆಗಿಲ್ಲ. ಮಂಡಳಿ ಕೂಡ ಅದೇ ಇದೆ,’ ಎಂದು ಬೈಜು ರವೀಂದ್ರನ್ ಸ್ಪಷ್ಟಪಡಿಸಿದ್ದಾರೆ.

ಬೈಜು ರವೀಂದ್ರನ್ ವಾದ ಇದು…
ಬೈಜು ರವೀಂದ್ರನ್ ಪ್ರಕಾರ ಶುಕ್ರವಾರ (ಫೆ. 23) ನಡೆದ ಇಜಿಎಂ ಸಭೆಯಲ್ಲಿ ಒಮ್ಮತದ ನಿರ್ಣಯ ಆಗಿಲ್ಲ. 170 ಷೇರುದಾರರ ಪೈಕಿ ಕೇವಲ 35 ಷೇರುದಾರರು ಮಾತ್ರವೇ ನಿರ್ಣಯದ ಪರವಾಗಿ ಮತ ಹಾಕಿದ್ದಾರಂತೆ. ಒಟ್ಟು ಷೇರುದಾರಿಕೆಯಲ್ಲಿ ಶೇ. 45 ಮಾತ್ರವೇ ಇವರ ಪಾಲು ಇದೆ. ಹೀಗಾಗಿ, ಈ ನಿರ್ಣಯಕ್ಕೆ ಸರಿಯಾದ ಬೆಂಬಲ ಇಲ್ಲ ಎನ್ನುವುದು ಬೈಜು ಅವರ ವಾದ.

ಬೈಜೂಸ್ ಸಂಸ್ಥೆಯ ಬೋರ್ಡ್​ನಲ್ಲಿ ಸಿಇಒ ಬೈಜು ರವೀಂದ್ರನ್, ಅವರ ಪತ್ನಿ ದಿವ್ಯಾ ಗೋಕುಲನಾಥ್, ಸಹೋದರ ರಿಜು ರವೀಂದ್ರನ್ ಈ ಮೂವರು ಇದ್ದಾರೆ. ಈ ಮೂವರಲ್ಲಿ ಯಾರೂ ಕೂಡ ಶುಕ್ರವಾರ ನಡೆದ ಇಜಿಎಂ ಸಭೆಯಲ್ಲಿ ಉಪಸ್ಥಿತರಿರಲಿಲ್ಲ. ಇದು ಈ ಮಂಡಳಿಯನ್ನು ತೆಗೆದುಹಾಕಲೆಂದೇ ಕರೆಯಲಾಗಿದ್ದ ಸಭೆಯಾಗಿದ್ದರಿಂದ ಇವರು ಹಾಜರಿರಲಿಲ್ಲ.

ಹೂಡಿಕೆದಾರರ ಪ್ರಕಾರ ಶೇ. 60ಕ್ಕೂ ಹೆಚ್ಚು ಷೇರುದಾರರ ಬೆಂಬಲ ಇದೆ

ಆರು ಮಂದಿ ಹೂಡಿಕೆದಾರರ ಗುಂಪು ಬೈಜೂಸ್ ಮಂಡಳಿಯನ್ನು ಉಚ್ಚಾಟಿಸುವ ಪ್ರಯತ್ನ ಮಾಡುತ್ತಿದೆ. ಬೈಜೂಸ್​ನ ಮಾತೃಸಂಸ್ಥೆಯಾಗಿರುವ ಥಿಂಕ್ ಅಂಡ್ ಲರ್ನ್​ನಲ್ಲಿ ಈ ಆರು ಹೂಡಿಕೆದಾರರು ಶೇ. 32ಕ್ಕಿಂತ ಹೆಚ್ಚು ಪಾಲು ಹೊಂದಿದ್ದಾರೆ. ಶುಕ್ರವಾರದ ಸಭೆಯಲ್ಲಿ, ಬೈಜೂಸ್ ಮಂಡಳಿ ಉಚ್ಚಾಟನೆ, ಸಿಇಒ ಉಚ್ಚಾಟನೆ ಸೇರಿದಂತೆ ಏಳು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಇವರ ಪ್ರಕಾರ ಶೇ. 60ಕ್ಕಿಂತ ಹೆಚ್ಚು ಷೇರುದಾರರು ಈ ಏಳೂ ನಿರ್ಣಯಗಳ ಪರ ಮತ ಚಲಾಯಿಸಿದ್ದಾರೆ.

ಬೈಜು ರವೀಂದ್ರನ್ ಅವರ ಕುಟುಂಬದವರು ಹೊಂದಿರುವ ಪಾಲು ಶೇ. 26.3 ಮಾತ್ರ. ಆದರೆ, ಇಜಿಎಂ ಸಭೆಯಲ್ಲಿ ನಿರ್ಣಯದ ಪರ ಬಂದಿರುವ ಮತ ಕೇವಲ 45 ಮಾತ್ರ ಎಂಬುದು ಇವರ ವಾದವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments