Thursday, December 19, 2024
spot_img
Homeರಾಜಕೀಯಬೆಳಗಾವಿ-ಗೋವಾ ನಡುವೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆ: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

ಬೆಳಗಾವಿ-ಗೋವಾ ನಡುವೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆ: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

ಬೆಳಗಾವಿ, ಫೆ.24: ಬೆಳಗಾವಿ-ಗೋವಾ ನಡುವೆ 43 ಕಿ.ಮೀ ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ಬೆಳಗಾವಿ ಜಿಲ್ಲೆಯ ಖಾನಾಪುರ (Khanapur) ತಾಲೂಕಿನ ಕಣಕುಂಬಿ ಬಳಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಗೋವಾ ಗಡಿಯಿಂದ ರಸ್ತೆ ಸುಧಾರಣೆ ಕಾಮಗಾರಿ ಇದಾಗಿದ್ದು, ಕರ್ನಾಟಕ- ಗೋವಾ ರಸ್ತೆ ಹದಗಟ್ಟಿದ್ದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು. ಮಳೆಗಾಲದಲ್ಲಿ ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದ್ದ ಈ ರಸ್ತೆಗೆ ಅಭಿವೃದ್ಧಿಯ ಕೂಗು ಕೇಳಿಬಂದ ಹಿನ್ನಲೆ ಕಾಮಗಾರಿ ಕೈಗೊಳ್ಳಲಾಗಿದೆ. ಇದೇ ರಸ್ತೆಯಲ್ಲಿ ಮಲಪ್ರಭಾ ನದಿಗೆ ಹೊಸ ಸೇತುವೆ ನಿರ್ಮಾಣವಾಗಲಿದ್ದು, 3 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಕಡಿಮೆ ಅವಧಿ ಪ್ರಯಾಣದ ರಸ್ತೆ
ಇನ್ನು ಭೂಮಿ ಪೂಜೆ ನೆರವೇರಿಸಿ ಕಣಕುಂಬಿಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ‌, ‘ಸುಮಾರು ದಿನಗಳಿಂದ ಗೋವಾ-ಚೋರ್ಲಾ ರಸ್ತೆ ದುರಸ್ತಿ ಮಾಡುವಂತೆ ಸಾರ್ವಜನಿಕರ ಆಗ್ರಹವಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಕಡಿಮೆ ಅವಧಿ ಪ್ರಯಾಣದ ರಸ್ತೆ ಇದಾಗಿದೆ. ಈ ರಸ್ತೆ ಬಗ್ಗೆ ಎರಡ್ಮೂರ ಸಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾಗಿ ಮನವಿ ಮಾಡಿದ್ದೆ. ಅದರ ಪರಿಣಾಮ ಮೂರು ತಿಂಗಳ ಹಿಂದೆಯೇ ಗಡ್ಕರಿ ಅವರು ರಸ್ತೆ ಕಾಮಗಾರಿಗೆ ಅನುಮೋದನೆ ನೀಡಿದ್ದರು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments