Monday, December 23, 2024
spot_img
Homeರಾಜ್ಯಗಡುವು ಮುಗಿಯುವುದರೊಳಿಗೆ ಅಂಗಡಿ ಬೋರ್ಡ್​ ಬದಲಾಗದಿದ್ದರೆ ಕರ್ನಾಟಕ ಬಂದ್​: ವಾಟಾಳ್ ಎಚ್ಚರಿಕೆ

ಗಡುವು ಮುಗಿಯುವುದರೊಳಿಗೆ ಅಂಗಡಿ ಬೋರ್ಡ್​ ಬದಲಾಗದಿದ್ದರೆ ಕರ್ನಾಟಕ ಬಂದ್​: ವಾಟಾಳ್ ಎಚ್ಚರಿಕೆ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಕನ್ನಡ ಪರ ಸಂಘಟನೆಗಳು ಪರಭಾಷಾ ಬೋರ್ಡ್ಗಳ ಮೇಲೆ ಸಮರ ಸಾರಿದ್ದವು. ಈ ಮೂಲಕ ವರ್ತಕರು ಹಾಗೂ ಕನ್ನಡ ಪರ ಹೋರಾಟಗಾರರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೋರಾಟಗಾರ ವಾಟಾಳ್ ನಾಗರಾಜ್​​ ಗಡುವು ಮುಗಿಯೋದರೊಳಗೆ ಬೋರ್ಡ್ ಬದಲಾಗದಿದ್ದರೆ ಕರ್ನಾಟಕ ಬಂದ್​ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, ಫೆಬ್ರವರಿ 25: ನಾಮಫಲಕಕ್ಕಾಗಿ ಮತ್ತೆ ಕನ್ನಡದ ರಣಕಹಳೆ ಮೊಳಗಲಿದೆ. ಕನ್ನಡ ನಾಮಫಲಕ ಕಡ್ಡಾಯಕ್ಕೆ 3 ದಿನಗಳಷ್ಟೇ ಬಾಕಿ ಉಳಿದಿದೆ. ಗಡುವು ಮುಗಿಯೋದರೊಳಗೆ ಬೋರ್ಡ್ ಬದಲಾಗದಿದ್ದರೆ ಕರ್ನಾಟಕ ಬಂದ್​ ಮಾಡುತ್ತೇವೆ ಎಂದು ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಕನ್ನಡ ನಾಮಫಲಕಕ್ಕೆ ಇನ್ನೂ ಕೆಲವರು ಆಸಕ್ತಿ ತೋರಿಲ್ಲ. ನಾಮಫಲಕದ ಜೊತೆಗೆ ಕನ್ನಡಿಗರಿಗೆ ಉದ್ಯೋಗ ಬೇಕು. ಐಟಿ-ಬಿಟಿ ಕಂಪನಿಗಳಲ್ಲಿ ಉದ್ಯೋಗವನ್ನ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ. ಮುಂದಿನ ತಿಂಗಳು ಎಲ್ಲಾ ಸಂಘಟನೆ ಒಗ್ಗೂಡಿಸುತ್ತೇವೆ. ಕನ್ನಡ ಬೋರ್ಡ್ ಕಡ್ಡಾಯ ಆಗದಿದ್ದರೆ ಕರ್ನಾಟಕ ಬಂದ್​ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕನ್ನಡ ಮರೆತ ಅಂಗಡಿ-ಮುಂಗಟ್ಟು ಮಾಲೀಕರ ವಿರುದ್ಧ ಕನ್ನಡ ಪರ ಸಂಘಟನೆಗಳು ಇತ್ತೀಚೆಗೆ ಪ್ರತಿಭಟಿಸಿದ್ದರು. ಬಳಿಕ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಸೂಚನೆಯನ್ನ ಸರ್ಕಾರ ನೀಡಿತ್ತು. ಫೆಬ್ರವರಿ 28ರ ಡೆಡ್​ಲೈನ್ ನೀಡಿದೆ. ಈ ಗಡುವು ಮುಗಿಯಲು ಸದ್ಯ ಮೂರು ದಿನವಷ್ಟೇ ಬಾಕಿ ಇದೆ.

ಕನ್ನಡ ನಿರ್ಲಕ್ಷಿಸಿದರೆ ದೂರು
ಕನ್ನಡ ನಾಮಫಲಕ ಅಳವಡಿಕೆ ವಿಚಾರ ವಿಧಾನಸಭೆ, ಪರಿಷತ್​ನಲ್ಲೂ ಚರ್ಚೆಯಾಗಿ, ಅಂಗೀಕಾರ ಪಡೆದಿದೆ. ಕನ್ನಡ ನಾಮಫಲಕ ಕುರಿತು ಸಮಿತಿ ರಚಿಸಲಾಗಿದ್ದು, ಕೈಗಾರಿಕೆಗಳು ಕೂಡ ಕನ್ನಡ ಬಳಕೆ ಮಾಡಬೇಕು ಅಂತ ಸಚಿವ ಶಿವರಾಜ್ ತಂಗಡಗಿ ಎಚ್ಚರಿಸಿದ್ದರು. ಕನ್ನಡ ಕಣ್ಗಾವಲು ಆ್ಯಪ್​ ಅಭಿವೃದ್ಧಿಪಡಿಸಲಾಗಿದ್ದು, ಕನ್ನಡ ನಿರ್ಲಕ್ಷಿಸಿದರೆ ದೂರು ನೀಡಬಹುದು ಎಂದು ಮಾಹಿತಿ ನೀಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments